
ದುಬೈ: ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿರುವ ಚಾಂಪಿಯನ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿದೆ. ಭಾರತದ ಗೆಲುವಿಗೆ 252 ರನ್ ಗುರಿ ನೀಡಿದೆ.
ವಿಲ್ ಯಂಗ್ 15, ರಾಚಿನ್ ರವೀಂದ್ರ 37, ಕೇನ್ ವಿಲಿಯಮ್ಸನ್ 11, ಡೇರ್ಲ್ ಮಿಚೆಲ್ 63, ಟಾಮ್ ಲ್ಯಾಥಮ್ 14, ಗ್ಲೆನ್ ಫಿಲಿಪ್ಸ್ 34, ಮಿಚಲ್ ಬ್ರೇಸ್ ವೆಲ್ ಅಜೇಯ 53, ಮಿಚೆಲ್ ಸ್ಯಾಟ್ನರ್ 8, ನೇಥನ್ ಸ್ಮಿತ್ ಅಜೇಯ 0 ರನ್ ಗಳಿಸಿದ್ದಾರೆ.
ಭಾರತದ ಪರವಾಗಿ ಕುಲದೀಪ್ ಯಾದವ್ 2, ವರುಣ್ ಚಕ್ರವರ್ತಿ 2, ಮಹಮ್ಮದ್ ಶಮಿ, ರವೀಂದ್ರ ಜಡೇಜ ತಲಾ ಒಂದು ವಿಕೆಟ್ ಪಡೆದರು.