
ದುಬೈ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಸತತ ಐದು ಪಂದ್ಯಗಳಲ್ಲಿ ಟಾಸ್ ಸೋತಂತಾಗಿದೆ.
ಟೀಂ ಇಂಡಿಯಾ 11 ಆಟಗಾರರ ಪಟ್ಟಿ ಪ್ರಕಟಿಸಲಾಗಿದೆ. ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ಕುಲದೀಪ್, ವರುಣ್ ಚಕ್ರವರ್ತಿ, ಮೊಹಮ್ಮದ್ ಶಮಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ.
ನ್ಯೂಜಿಲೆಂಡ್ ತಂಡ: ವಿಲ್ ಯಂಗ್, ರಾಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್, ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್(ಸಿ), ನಾಥನ್ ಸ್ಮಿತ್, ಕೈಲ್ ಜೇಮೀಸನ್, ವಿಲ್ ಒ’ರೂರ್ಕ್,
ಅಜೇಯ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿರುವ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗೆಲ್ಲುವ ಕಾರ್ಯತಂತ್ರ ರೂಪಿಸಿದೆ. ಐಸಿಸಿ ಟೂರ್ನಿಗಳ ಎಲ್ಲಾ ಪಂದ್ಯಗಳಲ್ಲಿ ಭಾರತದ ವಿರುದ್ಧ 10-6 ಅಂತರದ ಮುನ್ನಡೆಯಲ್ಲಿರುವ ಕಿವೀಸ್ ತಂಡವನ್ನು ಭಾರತ ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ. ಭಾರತ ತಂಡ ಪ್ರಶಸ್ತಿ ಗೆದ್ದರೆ ಚಾಂಪಿಯನ್ ಟ್ರೋಫಿಯಲ್ಲಿ ಮೂರು ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸಲಿದೆ. ಕಳೆದ 14 ಐಸಿಸಿ ಟೂರ್ನಿಗಳ ಪೈಕಿ ಭಾರತ 12ರಲ್ಲಿ ನಾಕೌಟ್ ಹಂತಕ್ಕೇರಿದ್ದು ಮೂರರಲ್ಲಿ ಮಾತ್ರ ಗೆದ್ದಿದೆ.
2011 ರಿಂದ ಆಡಿದ 8 ಐಸಿಸಿ ಟೂರ್ನಿಗಳ ಪೈಕಿ ನ್ಯೂಜಿಲೆಂಡ್ 1ರಲ್ಲಿ ಮಾತ್ರ ಯಶಸ್ವಿಯಾಗಿದೆ. ಇಂದಿನ ಫೈನಲ್ ನಲ್ಲಿ ವಿಜೇತ ಚಾಂಪಿಯನ್ ತಂಡಕ್ಕೆ 19.5 ಕೋಟಿ ರೂಪಾಯಿ ಬಹುಮಾನ ಸಿಗಲಿದೆ. ರನ್ನರ್ ಅಪ್ ತಂಡಕ್ಕೆ 9.7 ಕೋಟಿ ರೂ., ಸೆಮಿಫೈನಲ್ ನಲ್ಲಿ ಅಭಿಯಾನ ಮುಗಿಸಿದ ತಂಡಗಳಿಗೆ 4.9 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು.