ಸಕ್ರಿಯ ಫಾರ್ಮಕ್ಯೂಟಿಕಲ್ ವಸ್ತುಗಳ (ಎಪಿಐ) ಮೇಲೆ ಕ್ಯೂಆರ್ ಕೋಡ್‌ಗಳನ್ನು ಭಾರತ ಸರ್ಕಾರ ಕಡ್ಡಾಯಗೊಳಿಸಿದೆ. ಈ ಮೂಲಕ ನಕಲಿ ಮದ್ದುಗಳಿಗೆ ಕಡಿವಾಣ ಹಾಕಲು ಹೊಸ ಕಾನೂನನ್ನು ತರಲು ಸರ್ಕಾರ ಮುಂದಾಗಿದ್ದು, ಜನವರಿ 1, 2023ರಿಂದ ಅನುಷ್ಠಾನಕ್ಕೆ ತರಲಿದೆ.
ಎಪಿಐಗಳ ಮೇಲೆ ಕ್ಯೂಆರ್ ಕೋಡ್ ಇದ್ದಲ್ಲಿ ಆ ಮದ್ದುಗಳನ್ನು ಯಾವ ಫಾರ್ಮಾ ಕಂಪನಿ ತಯಾರಿಸಿದೆ ಎಂದು ತಿಳಿಯುವುದು ಸಾಧ್ಯವಾಗಲಿದ್ದು, ಕಚ್ಛಾ ವಸ್ತುಗಳ ಮೂಲ ಯಾವುದು ಮತ್ತು ಉತ್ಪನ್ನಗಳು ಎಲ್ಲಿ ಹೋಗುತ್ತಿವೆ ಎಂಬಂಥ ವಿವರಗಳಿಂದಾಗಿ ಮದ್ದುಗಳ ತಯಾರಿಕೆಯ ಫಾರ್ಮುಲಾ ವಿರೂಪಗೊಳಿಸುವ ಸಾಧ್ಯತೆ ಕಡಿಮಯಾಗಲಿದೆ.
ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಭಾವಚಿತ್ರ ಇರುವುದನ್ನು ಪ್ರಶ್ನಿಸಿದ್ದ ಅರ್ಜಿ ವಜಾ – ಅರ್ಜಿದಾರನಿಗೆ ದಂಡ ವಿಧಿಸಿದ ನ್ಯಾಯಾಲಯ
ಕೋಡ್‌ನಲ್ಲಿ ಹುದುಗಿಸಲಾದ ಮಾಹಿತಿಯಲ್ಲಿ ಉತ್ಪನ್ನದ ಗುರುತಿನ ಕೋಡ್, ಎಪಿಐ ಹೆಸರು, ಬ್ರಾಂಡ್ ಹೆಸರು, ಉತ್ಪಾದಕರ ವಿಳಾಸಗಳನ್ನು ಒಳಗೊಂಡಿರಲಿದೆ.
ಮಾತ್ರೆಗಳು, ಕ್ಯಾಪ್ಸೂಲ್‌ಗಳು ಮತ್ತು ಸಿರಪ್‌ಗಳ ಉತ್ಪಾದನೆಗೆ ಬೇಕಾದ ಕಚ್ಛಾ ವಸ್ತುಗಳಾದ ಎಪಿಐಗಳು ಬಹುತೇಕ ಚೀನಾದಿಂದ ಆಮದಾಗುತ್ತಿವೆ. ಉತ್ಪಾದನೆಯಾಗುತ್ತಿರುವ ಮದ್ದುಗಳ ಪೈಕಿ 20% ನಕಲಿ ಎಂದೂ, 3 ಪ್ರತಿಶತ ಮದ್ದುಗಳ ಕಳಪೆ ಗುಣಮಟ್ಟದವೆಂದು ಬಹಳ ವರದಿಗಳು ತಿಳಿಸುತ್ತದೆ.
ಮದ್ದುಗಳ ಪ್ಯಾಕ್‌ಗಳಿಗೆ ಕ್ಯೂಆರ್ ಕೋಡ್ ಕಡ್ಡಾಯಗೊಳಿಸಲು ಶಾಸನಾತ್ಮಕ ಚೌಕಟ್ಟೊಂದನ್ನು ತರಲೆಂದು ತಜ್ಞರ ಸಮಿತಿಯನ್ನು ಜುಲೈ 2020ರಲ್ಲಿ ರಚಿಸಲಾಗಿತ್ತು.
ಇಂಥದ್ದೇ ಒಂದು ಕಾನೂನಿನ ಅಡಿ, ಸಾರ್ವಜನಿಕ ಕ್ರೋಢೀಕರಣದಲ್ಲಿ ಪಡೆದುಕೊಳ್ಳಲಾದ ಎಲ್ಲಾ ಮದ್ದುಗಳಿಗೆ ಕ್ಯೂಆರ್‌ಕೋಡ್/ಬಾರ್‌ಕೋಡ್ ಅನ್ನು ಏಪ್ರಿಲ್ 1,2020 ರಿಂದ ಕಡ್ಡಾಯಗೊಳಿಸಲಾಗಿದೆ.