ನವದೆಹಲಿ: ದೇಶದಲ್ಲಿ 18,870 ಜನರಿಗೆ ಹೊಸದಾಗಿ ಕೋವಿಡ್ ಸೋಂಕು ತಗುಲಿದೆ. ಕಳೆದ 24 ಗಂಟೆಗಳಲ್ಲಿ 378 ಮಂದಿ ಸಾವು ಕಂಡಿದ್ದಾರೆ. ಚೇತರಿಕೆಯ ಪ್ರಮಾಣ ಶೇಕಡ 97.81 ರಷ್ಟಿದೆ.
ಭಾರತದಲ್ಲಿ ಒಟ್ಟು ಕೋವಿಡ್ -19 ಸಕ್ರಿಯ ಪ್ರಕರಣಗಳು 2,82,560 ಕ್ಕೆ ಇಳಿದಿವೆ. ಇದು 194 ದಿನಗಳಲ್ಲಿ ಕಡಿಮೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತೋರಿಸಿವೆ.
ಕೇಂದ್ರ ಆರೋಗ್ಯ ಸಚಿವಾಲಯ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶವು ಒಟ್ಟು 28,178 ಚೇತರಿಕೆ ಕಂಡಿದೆ, ಒಟ್ಟು ಚೇತರಿಕೆ ದರವು ಸುಮಾರು ಶೇಕಡ 97.81 ರಷ್ಟಿದ್ದು, 3,29,86,180 ಗುಣಮುಖರಾಗಿದ್ದಾರೆ. ಸಾವಿನ ಸಂಖ್ಯೆ 4,47,751 ಕ್ಕೆ ಏರಿಕೆಯಾಗಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಪ್ರಕಾರ, ಸೆಪ್ಟೆಂಬರ್ 28 ರವರೆಗೆ 56,74,50,185 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇವುಗಳಲ್ಲಿ 15,04,713 ಮಾದರಿಗಳನ್ನು ಮಂಗಳವಾರ ಪರೀಕ್ಷಿಸಲಾಗಿದೆ.