ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾ ಕಂಪನಿಗಳದ್ದೇ ದೊಡ್ಡ ಪ್ರಾಬಲ್ಯ. ಶಿಯೊಮಿ, ರಿಯಲ್ ಮಿ, ಒಪ್ಪೋ ಸೇರಿದಂತೆ ಹಲವು ಸ್ಮಾರ್ಟ್ ಫೋನ್ ಕಂಪನಿಗಳು ಅಗ್ಗದ ಬೆಲೆಗೆ ಲಭ್ಯವಿರುವ ಕಾರಣ ಗ್ರಾಹಕರು ಸಹ ಇದರ ಖರೀದಿಗೆ ಮುಂದಾಗುತ್ತಾರೆ.
ಇದೀಗ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ಒಂದನ್ನು ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದ್ದು, 12,000 ರೂ. ಗಳಿಗಿಂತ ಕಡಿಮೆ ಬೆಲೆಯ ಚೀನಾ ಕಂಪನಿಗಳ ಸ್ಮಾರ್ಟ್ಫೋನ್ ಗಳ ಮಾರಾಟದ ಮೇಲೆ ನಿರ್ಬಂಧ ಹೇರಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಚೀನಾ ಕಂಪನಿಗಳು ಪ್ರಶಕ್ತ ಸಾಲಿನಲ್ಲಿ ಶೇಕಡ 80ರಷ್ಟು ಮೊಬೈಲ್ ಗಳನ್ನು ಮಾರಾಟ ಮಾಡಿವೆ ಎನ್ನಲಾಗಿದ್ದು, ಇದಕ್ಕೆ ಅವುಗಳ ಬೆಲೆ ಕಾರಣ ಎಂದು ಹೇಳಲಾಗಿದೆ. ಹೀಗಾಗಿ 12,000 ರೂ. ಗಳಿಗಿಂತ ಕಡಿಮೆ ಬೆಲೆಯ ಮೊಬೈಲ್ ಗಳ ಮೇಲೆ ನಿರ್ಬಂಧ ಹೇರಿದರೆ ತನ್ನಿಂತಾನೆ ಚೀನಾ ಕಂಪನಿಗಳಿಗೆ ಹಿನ್ನಡೆಯಾಗಬಹುದು.
ಒಂದೊಮ್ಮೆ ಕೇಂದ್ರ ಸರ್ಕಾರದಿಂದ ಈ ರೀತಿಯ ನಿರ್ಬಂಧ ಹೇರಿಕೆಯಾದರೆ ಸ್ಯಾಮ್ಸಂಗ್, ಆಪಲ್ ಕಂಪನಿಗಳ ಮೊಬೈಲ್ ಮಾರಾಟದಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ. ದುಬಾರಿ ಬೆಲೆಯ ಸ್ಮಾರ್ಟ್ ಫೋನ್ ಗಳು ಎಂದೇ ಪರಿಗಣಿಸಲಾಗಿರುವ ಆಪಲ್ ಕಂಪನಿ, ಈಗ ಭಾರತದಲ್ಲಿ ಉತ್ಪಾದನೆಗೆ ಮುಂದಾಗಿರುವ ಕಾರಣ ಇದರ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.