ನಾಗಪುರ: ಭಾರತವು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುತ್ತಿದೆ ಮತ್ತು ಮೊದಲ ಬಾರಿಗೆ ರಕ್ಷಣಾ ರಫ್ತಿನಲ್ಲಿ ಅಗ್ರ 25 ದೇಶಗಳಲ್ಲಿ ಅಗ್ರ ಸ್ಥಾನದಲ್ಲಿದೆ ಎಂದು ಕೇಂದ್ರರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಭಾನುವಾರ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ಅಡ್ವಾಂಟೇಜ್ ವಿದರ್ಭ ಕಾರ್ಯಕ್ರಮದಲ್ಲಿ ರು ಮಾತನಾಡುತ್ತಿದ್ದ ಅವರು, ಸರ್ಕಾರವು 4,666 ರಕ್ಷಣಾ ಘಟಕಗಳ ನಾಲ್ಕು ಪಟ್ಟಿಗಳನ್ನು ಬಿಡುಗಡೆ ಮಾಡಿ ಆಮದನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಭಾರಿ ಉಳಿತಾಯವಾಗಿದೆ ಎಂದರು.
ಭಾರತವು ಮೊದಲ ಬಾರಿಗೆ ರಕ್ಷಣಾ ರಫ್ತಿನಲ್ಲಿ ಅಗ್ರ 25 ದೇಶಗಳ ಗುಂಪನ್ನು ಮುನ್ನಡೆಸುತ್ತಿದೆ. ಏಕೆಂದರೆ ಅದು ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗುತ್ತಿದೆ. ರಕ್ಷಣಾ ರಫ್ತು 2017-18ರಲ್ಲಿ 4,682 ಕೋಟಿ ರೂ.ಗಳಿಂದ 2022-23ರಲ್ಲಿ 15,916 ಕೋಟಿ ರೂ.ಗೆ ಏರಿಕೆಯಾಗಿದೆ. ಡಿಸೆಂಬರ್ 2023ರವರೆಗೆ ಸುಮಾರು 9,428 ಕೋಟಿ ರೂ.ಗಳಾಗಿದೆ ಎಂದು ತಿಳಿಸಿದ್ದಾರೆ.
ಆರ್ಡಿನೆನ್ಸ್ ಕಾರ್ಖಾನೆಗಳು ವಿಕೇಂದ್ರೀಕರಣಗೊಂಡ ನಂತರ ಬಹುತೇಕ ಎಲ್ಲಾ ರಕ್ಷಣಾ ಪಿಎಸ್‌ಯುಗಳು ಲಾಭದಲ್ಲಿವೆ. ರಕ್ಷಣಾ ಸಚಿವಾಲಯವು ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಉತ್ತೇಜಿಸುತ್ತಿದೆ ಎಂದು ಅವರು ಹೇಳಿದ್ದಾರೆ.