ನವದೆಹಲಿ : ಭಾರತದ ಶೇ. 57ರಷ್ಟು ಆದಾಯ ಕೇವಲ ಶೇ. 10ರಷ್ಟು ಜನರಲ್ಲಿ ಮಾತ್ರ ಇದೆ. ಶೇ. 20ರಷ್ಟು ಸಂಪತ್ತು ಶೇ. 1ರಷ್ಟು ಜನರ ಕೈಯಲ್ಲಿದೆ ಎಂದು ವಿಶ್ವ ಅಸಮಾನತೆ ಸಮೀಕ್ಷೆಯ ವರದಿ ಹೇಳಿದೆ.
ಈ ವರದಿಯನ್ನು ವಿಶ್ವ ಅಸಮಾನತೆ ಪ್ರಯೋಗಾಲಯದ ಸಹ ನಿರ್ದೇಶಕ ಲ್ಯೂಕಾಸ್ ಚಾನ್ಸೆಲ್, ಇಮ್ಯಾನುವಲ್ ಸಾಯೆಜ್ ಹಾಗೂ ಗೇಬ್ರಿಯಲ್ ಝುಕ್ಮನ್ ಬಿಡುಗಡೆ ಮಾಡಿದ್ದಾರೆ. ಅಲ್ಲದೇ, ಭಾರತವು ಶ್ರೀಮಂತ ಗಣ್ಯರನ್ನು ಹೊಂದಿದ, ಬಡ ಹಾಗೂ ಅಸಮಾನತೆಯ ರಾಷ್ಟ್ರವಾಗಿದೆ ಎಂದು ಅವರು ಹೇಳಿದ್ದಾರೆ.
ಅಸಾಧಾರಣ ಧೈರ್ಯ ಹೊಂದಿದ್ದ CDS ಬಿಪಿನ್ ರಾವತ್ ನಿಧನದಿಂದ ತುಂಬಲಾರದ ನಷ್ಟ
ಭಾರತದಲ್ಲಿ ಮಧ್ಯಮ ವರ್ಗದ ಜನರು ಬಡವರಾಗಿಯೇ ಇದ್ದಾರೆ. ಮಧ್ಯಮ ವರ್ಗದ ಜನರು ದೇಶದ ಶೇ. 29.4 ರಷ್ಟು ಆದಾಯವನ್ನು ಮಾತ್ರ ಗಳಿಸುತ್ತಿದ್ದಾರೆ. ಭಾರತೀಯ ವಯಸ್ಕ ಜನಸಂಖ್ಯೆಯ ಸರಾಸರಿ ವಾರ್ಷಿಕ ಆದಾಯ 2021 ರಲ್ಲಿ ರೂ. 2,04,200 ಆಗಿದೆ. ಆದರೆ, ಶೇ. 50ರಷ್ಟು ಜನರು ಗಳಿಸಿದ್ದು, ಕೇವಲ ರೂ. 53,61 ಮಾತ್ರ. ದೇಶದಲ್ಲಿನ ಶೇ. 10ರಷ್ಟು ಜನರು 20 ಪಟ್ಟು ಆದಾಯ ಗಳಿಸುತ್ತಿದ್ದಾರೆ. ದೇಶದಲ್ಲಿನ ಅರ್ಧದಷ್ಟು ಜನರು ಯಾವುದೇ ಸಂಪತ್ತು ಹೊಂದಿಲ್ಲ.
ವರದಿ ಪ್ರಕಾರ, ಭಾರತಕ್ಕಿಂತಲೂ ಹೆಚ್ಚು ಅಸಮಾನತೆ ಹೊಂದಿರುವ ರಾಷ್ಟ್ರಗಳು ಇವೆ. ಉತ್ತರ ಆಫ್ರಿಕಾ ಹಾಗೂ ಮಧ್ಯಪ್ರಾಚ್ಯ ದೇಶಗಳು ಜಗತ್ತಿನಲ್ಲಿಯೇ ಹೆಚ್ಚು ಅಸಮಾನತೆ ಹೊಂದಿರುವ ರಾಷ್ಟ್ರಗಳಾಗಿವೆ. ಯುರೋಪ್ ನಲ್ಲಿ ಅತೀ ಕಡಿಮೆ ಅಸಮಾನತೆ ಇದೆ ಎಂದು ತಿಳಿದು ಬಂದಿದೆ.