alex Certify BIG NEWS: ಸಂಬಂಧ ಕಾಪಾಡಿಕೊಳ್ಳುವಲ್ಲಿ ಭಾರತಕ್ಕೆ ಅಗ್ರಸ್ಥಾನ; ದಂಗಾಗಿಸುವಂತಿದೆ ʼವಿಚ್ಛೇದನʼ ಪ್ರಕರಣಗಳಲ್ಲಿ ಮುಂದಿರುವ ರಾಷ್ಟ್ರಗಳ ಪಟ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸಂಬಂಧ ಕಾಪಾಡಿಕೊಳ್ಳುವಲ್ಲಿ ಭಾರತಕ್ಕೆ ಅಗ್ರಸ್ಥಾನ; ದಂಗಾಗಿಸುವಂತಿದೆ ʼವಿಚ್ಛೇದನʼ ಪ್ರಕರಣಗಳಲ್ಲಿ ಮುಂದಿರುವ ರಾಷ್ಟ್ರಗಳ ಪಟ್ಟಿ

ಇತ್ತೀಚೆಗೆ ಪತಿ-ಪತ್ನಿಯರ ನಡುವೆ ಸಾಮರಸ್ಯ ಮೂಡದ ಕಾರಣ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಭಾರತದಲ್ಲೂ ಅನೇಕರು ವಿಚ್ಛೇದನದ ಮೊರೆ ಹೋದರೂ, ಕುಟುಂಬ ವ್ಯವಸ್ಥೆ ಮತ್ತು ಮೌಲ್ಯಗಳನ್ನು ಕಾಪಾಡುವ, ಸಂಬಂಧಗಳನ್ನು ಉಳಿಸುವ ದೇಶಗಳಲ್ಲಿ ಭಾರತವು ವಿಶ್ವದಲ್ಲಿ ಅಗ್ರಸ್ಥಾನದಲ್ಲಿದೆ.

ಹೌದು, ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ಕೇವಲ ಶೇ. 1 ರಷ್ಟಿವೆ. ಆದರೆ, ಅನೇಕ ದೇಶಗಳಲ್ಲಿ ಶೇ. 94 ರಷ್ಟು ಸಂಬಂಧಗಳು ಮುರಿದುಹೋಗಿವೆ. ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್‌ನ ಮಾಹಿತಿಯ ಪ್ರಕಾರ, ಏಷ್ಯಾದ ದೇಶಗಳಲ್ಲಿ ಸಂಬಂಧಗಳು ಕಡಿಮೆಯಾಗಿ ಒಡೆಯುತ್ತವೆ. ಆದರೆ, ಯುರೋಪ್ ಮತ್ತು ಅಮೆರಿಕದಲ್ಲಿ ಕುಟುಂಬಗಳು ಹೆಚ್ಚು ವಿಘಟಿಸುತ್ತಿವೆ. ಭಾರತದ ನಂತರದ ಸ್ಥಾನ ವಿಯೆಟ್ನಾಂಗಿದೆ. ಅಲ್ಲಿ ಕೇವಲ ಶೇ.7 ರಷ್ಟು ಸಂಬಂಧಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ. ಇದಲ್ಲದೆ, ತಜಕಿಸ್ತಾನ್‌ನಲ್ಲಿ ಶೇ. 10, ಇರಾನ್‌ನಲ್ಲಿ ಶೇ. 14 ಮತ್ತು ಮೆಕ್ಸಿಕೊದಲ್ಲಿ ಶೇ. 17 ರಷ್ಟು ಸಂಬಂಧಗಳು ವಿಚ್ಛೇದನದಲ್ಲಿ ಕೊನೆಯಾಗುತ್ತಿವೆ.

ಈಜಿಪ್ಟ್, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಟರ್ಕಿ ಮತ್ತು ಕೊಲಂಬಿಯಾ ಸಹ ಕಡಿಮೆ ಸಂಖ್ಯೆಯ ವಿಚ್ಛೇದನ ಹೊಂದಿರುವ 10 ದೇಶಗಳಲ್ಲಿ ಸೇರಿವೆ. ಆದರೆ, ಜಪಾನ್‌ನಲ್ಲಿ ಶೇ.35 ರಷ್ಟು ಸಂಬಂಧಗಳು ವಿಚ್ಛೇದನದಲ್ಲಿ ಕೊನೆಯಾಗುತ್ತವೆ ಎಂದು ಹೇಳಲಾಗಿದೆ. ಇದಲ್ಲದೆ, ಜರ್ಮನಿಯಲ್ಲಿ ಶೇ.38 ರಷ್ಟು ಸಂಬಂಧಗಳು ಮುರಿದುಹೋಗಿವೆ. ಬ್ರಿಟನ್ ನಲ್ಲಿ ಇದು ಶೇ. 41 ರಷ್ಟಿದೆ. ನೆರೆಯ ಚೀನಾದಲ್ಲಿ ಶೇ. 44ರಷ್ಟು ವಿವಾಹಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ. ಅಮೆರಿಕದಲ್ಲಿ ಈ ಅಂಕಿ ಅಂಶವು ಶೇ. 45 ರಷ್ಟಿದ್ದರೆ, ಡೆನ್ಮಾರ್ಕ್, ದಕ್ಷಿಣ ಕೊರಿಯಾ ಮತ್ತು ಇಟಲಿಯಲ್ಲಿ, ಶೇ.46ರಷ್ಟು ಸಂಬಂಧಗಳು ಮುರಿದುಹೋಗುತ್ತಿದೆ.

ಸಂಬಂಧಗಳನ್ನು ಕಾಪಾಡಿಕೊಳ್ಳುವಲ್ಲಿ ಯುರೋಪ್ ಸಂಪೂರ್ಣ ವಿಫಲವಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಪೋರ್ಚುಗಲ್‌ನಲ್ಲಿ ಶೇ. 94ರಷ್ಟು ವಿಚ್ಛೇದನ ಪ್ರಕರಣಗಳು ವರದಿಯಾಗಿದ್ದರೆ, ಸ್ಪೇನ್ ಕೊನೆಯದಾಗಿ ಎರಡನೇ ಸ್ಥಾನದಲ್ಲಿದೆ. ಅಲ್ಲಿ ಶೇ. 85ರಷ್ಟು ಸಂಬಂಧಗಳು ಮುರಿದು ಬೀಳುತ್ತಿವೆ. ಲಕ್ಸೆಂಬರ್ಗ್‌ನಲ್ಲಿ ಶೇ.79ರಷ್ಟು ಮದುವೆಗಳು ಕೊನೆಯಾಗುತ್ತಿದೆ. ಇಷ್ಟೇ ಅಲ್ಲ, ಶೇ.73 ರಷ್ಟು ಅಂಕಿಅಂಶಗಳು ರಷ್ಯಾದಲ್ಲಿ ವಿಚ್ಛೇದನ ಪಡೆದಿದ್ದರೆ, ಉಕ್ರೇನ್ ನಲ್ಲಿ ಶೇ.70ರಷ್ಟು ಮದುವೆಗಳು ಮುರಿದುಬಿದ್ದಿವೆ.

ಪ್ರಪಂಚಕ್ಕಿಂತ ಭಾರತದಲ್ಲಿ ಯಾಕೆ ಕಡಿಮೆ ವಿಚ್ಛೇದನ ಪ್ರಕರಣಗಳಿವೆ ?

ಸಮಾಜಶಾಸ್ತ್ರಜ್ಞರ ಪ್ರಕಾರ, ಭಾರತದಲ್ಲಿ ದೀರ್ಘ ಸಂಬಂಧಗಳಿಗೆ ಕಾರಣವೆಂದರೆ ಇಲ್ಲಿನ ಸಾಂಸ್ಕೃತಿಕ ಅಂಶ. ಇದರಲ್ಲಿ ಕುಟುಂಬ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಒತ್ತು ನೀಡಲಾಗುತ್ತದೆ. ಇದಲ್ಲದೆ, ಹೆಚ್ಚಿನ ಸಂಖ್ಯೆಯ ವಿಚ್ಛೇದನ ಪ್ರಕರಣಗಳು ಕಾನೂನು ಪ್ರಕ್ರಿಯೆಯ ಮೂಲಕ ಹೋಗುವುದಿಲ್ಲ. ಪತಿ ಮತ್ತು ಹೆಂಡತಿ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಹಲವು ಬಾರಿ ಅಂಕಿ ಅಂಶ ಬಹಿರಂಗವಾಗಿಲ್ಲ. ಆದರೂ ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ವಿಚ್ಛೇದನ ಪ್ರಕರಣಗಳು ಬಹಳ ಕಡಿಮೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...