ಏರುತ್ತಿರುವ ಬೆಲೆಗಳಿಂದಾಗಿ ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರ ಎಂಬಂತಾಗಿದೆ. ಹೀಗಾಗಿ ಇದನ್ನು ಸರಿದೂಗಿಸಲು ಅದಕ್ಕೆ ತಕ್ಕಂತೆ ವೇತನ ಸಿಗಲಿ ಎಂದು ಎಲ್ಲರೂ ಬಯಸುತ್ತಾರೆ ಅಂತವರಿಗೆ ಖುಷಿ ಸುದ್ದಿಯೊಂದು ಇಲ್ಲಿದೆ.
ವಿಲ್ಲಿಸ್ ಟವರ್ಸ್ ವಾಟ್ಸನ್ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಇದರ ಪ್ರಕಾರ 2023ರಲ್ಲಿ ಭಾರತೀಯ ಉದ್ಯೋಗಿಗಳ ವೇತನದಲ್ಲಿ ಸರಾಸರಿ ಶೇ.10 ರಷ್ಟು ಹೆಚ್ಚಳವಾಗಲಿದೆ ಎಂದು ತಿಳಿಸಿದೆ.
ಇದು ಏಷ್ಯಾ ಫೆಸಿಫಿಕ್ ವಲಯದಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ವೇತನ ಹೆಚ್ಚಳವಾಗಲಿದೆ ಎಂದು ಹೇಳಲಾಗಿದ್ದು, ಉದ್ಯೋಗಿಗಳು ಕಂಪನಿ ತೊರೆಯುತ್ತಿರುವ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಉದ್ಯೋಗಿಗಳನ್ನು ಉಳಿಸಿಕೊಳ್ಳುವ ಸಲುವಾಗಿ ಈ ಮಟ್ಟದ ವೇತನ ಹೆಚ್ಚಳ ಮಾಡಬಹುದು ಎಂದು ಅಭಿಪ್ರಾಯಪಡಲಾಗಿದೆ.