ತಾಲಿಬಾನ್ ಉಗ್ರರ ಆಡಳಿತದಿಂದ ಕಂಗೆಟ್ಟಿರುವ ಅಫ್ಘಾನಿಸ್ತಾನದಲ್ಲಿನ ಜನಸಾಮಾನ್ಯರ ನೆರವಿಗೆ ಭಾರತ ಧಾವಿಸಿದೆ. ಅಲ್ಲಿ ಹಸಿವಿನಿಂದ ಜನರು ಸಾಯುತ್ತಿರುವುದು ಹೆಚ್ಚಾಗಿದೆ. ಆರ್ಥಿಕ ಮುಗ್ಗಟ್ಟು ತಾಂಡವವಾಡುತ್ತಿದ್ದು, ತಾಲಿಬಾನಿಗಳು ಸರಕಾರ ನಡೆಸಲು ಅಮೆರಿಕ ಹಾಗೂ ವಿಶ್ವಸಂಸ್ಥೆಗಳ ಎದುರು ಸಹಾಯಧನಕ್ಕೆ ಕೈಚಾಚಿವೆ.
ಇಂತಹ ದುಸ್ಥಿತಿಯಲ್ಲಿ ಆಫ್ಘನ್ ಪ್ರಜೆಗಳಿಗೆ ನೆರವಾಗಲು ಸುಮಾರು 50 ಸಾವಿರ ಟನ್ ಗೋಧಿಯನ್ನು ಹಡಗಿನಲ್ಲಿ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಡಲು ಭಾರತ ಮುಂದಾಗಿದೆ.
ರೈತರು ಸೇರಿದಂತೆ ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: ಹೊಸ ಯೋಜನೆಗೆ ಜ. 26 ರಂದು ಚಾಲನೆ
ಅದು ಕೂಡ ಅತ್ಯಂತ ಹತ್ತಿರ ಹಾಗೂ ಸುಲಭ ಮಾರ್ಗವಾಗಿರುವ ಪಾಕಿಸ್ತಾನದ ಪ್ರಾಂತ್ಯದ ಮೂಲಕ ಎನ್ನುವುದು ವಿಶೇಷ. ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರರಾಗಿರುವ ಅರಿಂಧನ್ ಬಗಿಚಿ ತಿಳಿಸಿದ್ದಾರೆ.
ಪಾಕಿಸ್ತಾನದ ಸರಕಾರದ ಜತೆಗೆ ಈಗಾಗಲೇ ಗೋಧಿ ರವಾನೆ ಸಂಬಂಧ ಚರ್ಚೆ ನಡೆಸುತ್ತಿದ್ದೇವೆ. ನಮ್ಮ ಹಡಗನ್ನು ಪಾಕಿಸ್ತಾನದ ಬಂದರುಗಳ ಮೂಲಕ ಕಳುಹಿಸಿಕೊಡಲು ಉನ್ನತಮಟ್ಟದಲ್ಲಿ ಅನುಮತಿ ನೀಡುವಂತೆ ಸೂಚಿಸಿದ್ದೇವೆ. ಪಾಕಿಸ್ತಾನ ಸರಕಾರ ಕೂಡ ಸ್ಪಂದಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇನ್ನು, ಕೊರೊನಾ ಬಾಧಿತ ಅಫ್ಘಾನಿಸ್ತಾನಿಯರ ನೆರವಿಗೂ ಭಾರತ ಧಾವಿಸಿದ್ದು, ದೇಶೀಯವಾಗಿ ತಯಾರಿಸಲಾಗಿರುವ ’ಕೊವ್ಯಾಕ್ಸಿನ್’ ಲಸಿಕೆಯ 5 ಲಕ್ಷ ಡೋಸ್‌ಗಳನ್ನು ಕಾಬೂಲ್‌ನಲ್ಲಿರುವ ಇಂದಿರಾ ಗಾಂಧಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಮಾನವೀಯತೆ ಆಧಾರದ ಮೇಲೆ ಸಹಾಯ ಹಸ್ತ ಚಾಚಿದ್ದೇವೆ ಎಂದು ಸರಕಾರ ಹೇಳಿಕೊಂಡಿದೆ. ಕಳೆದ ತಿಂಗಳು ಸರಕಾರವು ಅಫ್ಘಾನಿಸ್ತಾನಕ್ಕೆ 1.6 ಟನ್‌ಗಳಷ್ಟು ವೈದ್ಯಕೀಯ ನೆರವು (ಔಷಧಗಳು, ತುರ್ತು ಚಿಕಿತ್ಸೆಯ ಸಾಧನಗಳು) ನೀಡಿತ್ತು. ಅದು ಕೂಡ ವಿಶ್ವ ಆರೋಗ್ಯ ಸಂಸ್ಥೆಯ ಮೂಲಕ ಎನ್ನುವುದು ಗಮನಾರ್ಹ.