alex Certify ಭಾರತದ ‘ಇಂಟರ್ನೆಟ್’ ಬಳಕೆದಾರರ ಕುರಿತಂತೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ‘ಇಂಟರ್ನೆಟ್’ ಬಳಕೆದಾರರ ಕುರಿತಂತೆ ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಪ್ರಕಾರ, ಮಾರ್ಚ್ 2024 ರ ಹೊತ್ತಿಗೆ ದೇಶವು ಒಟ್ಟು 954.40 ಮಿಲಿಯನ್ ಇಂಟರ್ನೆಟ್ ಚಂದಾದಾರರನ್ನು ಹೊಂದಿದೆ ಎಂದು ಸಂವಹನ ರಾಜ್ಯ ಸಚಿವ ಡಾ ಚಂದ್ರಶೇಖರ್ ಪೆಮ್ಮಸಾನಿ ಗುರುವಾರ ಸಂಸತ್ತಿಗೆ ತಿಳಿಸಿದ್ದಾರೆ. ಸಚಿವರು ಸಮಗ್ರ ದತ್ತಾಂಶವನ್ನು ಸಂಸತ್‌ ಮುಂದಿಟ್ಟಿದ್ದಾರೆ.  ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ  ಇಂಟರ್ನೆಟ್ ಬಳಕೆಯಲ್ಲಿ  ಗಮನಾರ್ಹ ವ್ಯತ್ಯಾಸಗಳನ್ನು ಅವರು ಎತ್ತಿ ತೋರಿಸಿದ್ದಾರೆ.

ವರದಿ ಪ್ರಕಾರ, ಭಾರತವು ಗ್ರಾಮೀಣ ಪ್ರದೇಶಗಳಲ್ಲಿ 398.35 ಮಿಲಿಯನ್ ಮತ್ತು ನಗರ ಪ್ರದೇಶಗಳಲ್ಲಿ 556.05 ಮಿಲಿಯನ್ ಇಂಟರ್ನೆಟ್ ಚಂದಾದಾರರನ್ನು ಹೊಂದಿದೆ. ಉತ್ತರ ಪ್ರದೇಶವು ಅತಿ ಹೆಚ್ಚು 129.53 ಮಿಲಿಯನ್  ಇಂಟರ್ನೆಟ್ ಚಂದಾದಾರರನ್ನು ಹೊಂದಿದೆ. ನಗರ ಇಂಟರ್ನೆಟ್ ಚಂದಾದಾರರ ಸಂಖ್ಯೆ 65.76 ಮಿಲಿಯನ್ ಆಗಿದ್ದರೆ, ಗ್ರಾಮೀಣ ಪ್ರದೇಶದಲ್ಲಿ 63.77 ಮಿಲಿಯನ್ ಬಳಕೆದಾರರಿದ್ದಾರೆ. ಮಹಾರಾಷ್ಟ್ರ, ಒಟ್ಟು ಬಳಕೆದಾರರ  ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 109.75 ಮಿಲಿಯನ್‌ ಚಂದಾದಾರರಿದ್ದಾರೆ.  ನಗರದಲ್ಲಿ 75.99 ಮಿಲಿಯನ್ ಇಂಟರ್ನೆಟ್ ಚಂದಾದಾರರಿದ್ದರೆ  ಗ್ರಾಮೀಣ ಪ್ರದೇಶದಲ್ಲಿ ಈ ಸಂಖ್ಯೆ 33.76 ಮಿಲಿಯನ್ ಆಗಿದೆ.

ಒಟ್ಟು 63.18 ಮಿಲಿಯನ್ ಇಂಟರ್ನೆಟ್ ಚಂದಾದಾರರನ್ನು ಹೊಂದಿರುವ ಪಶ್ಚಿಮ ಬಂಗಾಳ ಮೂರನೇ ಸ್ಥಾನದಲ್ಲಿದೆ. ರಾಜ್ಯವು 25.15 ಮಿಲಿಯನ್ ಗ್ರಾಮೀಣ ಬಳಕೆದಾರರನ್ನು ಮತ್ತು 38.04 ಮಿಲಿಯನ್ ನಗರ ಬಳಕೆದಾರರನ್ನು ಹೊಂದಿದೆ.  ತಮಿಳುನಾಡು ಒಟ್ಟು 61.23 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ. ಇವರಲ್ಲಿ 17.23 ಮಿಲಿಯನ್ ಗ್ರಾಮೀಣ ಚಂದಾದಾರರು ಮತ್ತು 44.00 ಮಿಲಿಯನ್ ನಗರ ಚಂದಾದಾರರು ಸೇರಿದ್ದಾರೆ.

57.88 ಮಿಲಿಯನ್ ಒಟ್ಟು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಕರ್ನಾಟಕವು ಮೊದಲ ಐದನೇ ಸ್ಥಾನದಲ್ಲಿದೆ. ಇದರಲ್ಲಿ 20.79 ಮಿಲಿಯನ್ ಗ್ರಾಮೀಣ ಮತ್ತು 37.09 ಮಿಲಿಯನ್ ನಗರ ಚಂದಾದಾರರು ಸೇರಿದ್ದಾರೆ.

ಅತಿ ಕಡಿಮೆ ಇಂಟರ್ನೆಟ್ ಬಳಕೆದಾರರು ಸಿಕ್ಕಿಂನಲ್ಲಿದ್ದಾರೆ. ಇದು ಒಟ್ಟು 600,000 ಚಂದಾದಾರರನ್ನು ಹೊಂದಿದೆ. ಅದರ ಗ್ರಾಮೀಣ  0.31 ಮಿಲಿಯನ್  ಮತ್ತು ನಗರದಲ್ಲಿ 0.29 ಮಿಲಿಯನ್‌ ಚಂದಾದಾರರಿದ್ದಾರೆ.

ಅತಿ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವು ದೆಹಲಿಯಾಗಿದೆ. ಇದು 35.18 ಮಿಲಿಯನ್ ಚಂದಾದಾರರನ್ನು ಹೊಂದಿದೆ. ದೆಹಲಿಯ ನಂತರ, ಜಮ್ಮು ಮತ್ತು ಕಾಶ್ಮೀರವು 9.55 ಮಿಲಿಯನ್ ಇಂಟರ್ನೆಟ್ ಬಳಕೆದಾರರನ್ನು ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...