ನವದೆಹಲಿ: ಗಾಜಾದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ, ಭಾರತವು ಸೋಮವಾರ 2.5 ಮಿಲಿಯನ್ ಡಾಲರ್‌ನ ಮೊದಲ ಕಂತನ್ನು ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆಗೆ(UNRWA) ಬಿಡುಗಡೆ ಮಾಡಿದೆ.
UNRWA, 1950 ರಿಂದ ಕಾರ್ಯನಿರ್ವಹಿಸುತ್ತಿದೆ. ನೋಂದಾಯಿತ ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗೆ ನೇರ ಪರಿಹಾರ ಮತ್ತು ಕೆಲಸ ಕಾರ್ಯಕ್ರಮಗಳನ್ನು ನಡೆಸುತ್ತದೆ. ಇದು ಯುಎನ್ ಸದಸ್ಯ ರಾಷ್ಟ್ರಗಳ ಸ್ವಯಂಪ್ರೇರಿತ ಕೊಡುಗೆಯಾಗಿ ಹಣ ಪಡೆಯುತ್ತದೆ.
ಯುಎನ್ ಏಜೆನ್ಸಿಯು ಗಾಜಾದಲ್ಲಿ ಇಸ್ರೇಲ್-ಹಮಾಸ್ ಯುದ್ಧದ ಮಧ್ಯದಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ಮುಂದುವರಿಸಲು ಹೆಣಗಾಡುತ್ತಿದೆ ಮತ್ತು ವಿಶೇಷವಾಗಿ ಗಾಜಾದಲ್ಲಿ ಕಷ್ಟಕರ ಸಮಯದಲ್ಲಿ ಬರುತ್ತಿರುವ ಭಾರತದ “ಉದಾರ ಕೊಡುಗೆ” ಯನ್ನು ಶ್ಲಾಘಿಸಿ ಸ್ವಾಗತಿಸಿದೆ.
ಭಾರತದ ಬೆಂಬಲವು ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗೆ ಒದಗಿಸಲಾದ ಶಿಕ್ಷಣ, ಆರೋಗ್ಯ, ಪರಿಹಾರ ಮತ್ತು ಸಾಮಾಜಿಕ ಸೇವೆಗಳು ಸೇರಿದಂತೆ ಏಜೆನ್ಸಿಯ ಪ್ರಮುಖ ಕಾರ್ಯಕ್ರಮಗಳು ಮತ್ತು ಸೇವೆಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ಕೊಡುಗೆಯ ಎರಡನೇ ಕಂತನ್ನು ಚಾರ್ಜ್ ಡಿಅಫೇರ್ಸ್ ಎಲಿಜಬೆತ್ ರೋಡ್ರಿಗಸ್ ಅವರು ಯುಎನ್‌ಆರ್‌ಡಬ್ಲ್ಯೂಎಗೆ ಹಸ್ತಾಂತರಿಸಿದ್ದಾರೆ ಎಂದು ಪ್ಯಾಲೆಸ್ಟೈನ್‌ನಲ್ಲಿರುವ ಭಾರತದ ಪ್ರತಿನಿಧಿ ಕಚೇರಿಯ ಪತ್ರಿಕಾ ಹೇಳಿಕೆ ತಿಳಿಸಿದೆ.
ಈ ಪ್ರದೇಶದಲ್ಲಿ ಏಜೆನ್ಸಿಯ ಚಟುವಟಿಕೆಗಳಿಗೆ ಮತ್ತು ಪ್ಯಾಲೇಸ್ಟಿನಿಯನ್ ನಿರಾಶ್ರಿತರಿಗೆ ಒದಗಿಸುವ ಸೇವೆಗಳಿಗೆ ತನ್ನ ನಿರಂತರ ಬೆಂಬಲವನ್ನು ನೀಡುವುದಾಗಿ ಭಾರತ ಹೇಳಿದೆ.
ಇದಕ್ಕೂ ಮೊದಲು ನವೆಂಬರ್ 19 ರಂದು, ಭಾರತವು ಈಜಿಪ್ಟ್‌ನ ಎಲ್-ಅರಿಶ್ ವಿಮಾನ ನಿಲ್ದಾಣದ ಮೂಲಕ ಪ್ಯಾಲೆಸ್ಟೈನ್ ಜನರಿಗೆ 32 ಟನ್‌ಗಳಷ್ಟು “ಮಾನವೀಯ ನೆರವು” ತಲುಪಿಸಿತ್ತು. 2018 ರಿಂದ ಭಾರತವು UNRWAಗೆ USD 30 ಮಿಲಿಯನ್ ನೀಡಿದೆ.