alex Certify BIG NEWS: ದೇಶದಲ್ಲಿ ಐಪಿಸಿ ಬದಲಿಗೆ ಹೊಸ ಕಾನೂನು ಜಾರಿ: ಸಂಸತ್ ನಲ್ಲಿ ಒಪ್ಪಿಗೆ ಪಡೆದ ನ್ಯಾಯ ಸಂಹಿತಾ, ಸುರಕ್ಷಾ ಸಂಹಿತಾ, ಸಾಕ್ಷಿ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ದೇಶದಲ್ಲಿ ಐಪಿಸಿ ಬದಲಿಗೆ ಹೊಸ ಕಾನೂನು ಜಾರಿ: ಸಂಸತ್ ನಲ್ಲಿ ಒಪ್ಪಿಗೆ ಪಡೆದ ನ್ಯಾಯ ಸಂಹಿತಾ, ಸುರಕ್ಷಾ ಸಂಹಿತಾ, ಸಾಕ್ಷಿ ಮಸೂದೆಗೆ ರಾಷ್ಟ್ರಪತಿ ಒಪ್ಪಿಗೆ

ನವದೆಹಲಿ: 3 ಹೊಸ ಕಾನೂನುಗಳಿಗೆ ರಾಷ್ಟ್ರಪತಿ ಅನುಮೋದನೆ ನೀಡಿದ್ದಾರೆ. ಈ ಮೂಲಕ ಭಾರತವು ಹೊಸ ಅಪರಾಧ ಕಾನೂನುಗಳನ್ನು ಪಡೆದಿದೆ. ವಸಾಹತುಶಾಹಿ ಯುಗದ ಕೋಡ್‌ಗಳನ್ನು ಬದಲಿಸುವ ಮಸೂದೆಗಳು ರಾಷ್ಟ್ರಪತಿಗಳ ಅನುಮೋದನೆ ಪಡೆದುಕೊಂಡಿವೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಮಸೂದೆಗೆ ಒಪ್ಪಿಗೆ ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ(IPC), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ(CrPC) ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬದಲಿಸುವ ಮೂರು ಕ್ರಿಮಿನಲ್ ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಸಹಿ ಹಾಕಿದ್ದಾರೆ.

ಸೋಮವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಒಪ್ಪಿಗೆ ಪಡೆದ ನಂತರ ಭಾರತೀಯ ದಂಡ ಸಂಹಿತೆ(IPC), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ(CrPC) ಮತ್ತು ಎವಿಡೆನ್ಸ್ ಆಕ್ಟ್ ಅನ್ನು ಬದಲಿಸಲು ಮೂರು ಕ್ರಿಮಿನಲ್ ಮಸೂದೆಗಳು ಕಾನೂನಾಗಿ ಜಾರಿಗೆ ಬಂದವು.

ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ಭಾರತೀಯ ಸಾಕ್ಷಿ ಸಂಹಿತಾ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮಸೂದೆ 2023 ಮತ್ತು ಭಾರತೀಯ ನ್ಯಾಯ ಸಂಹಿತಾ, 2023 ಅನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದವು. ರಾಷ್ಟ್ರಪತಿಗಳು ಕ್ರಿಮಿನಲ್ ಕಾನೂನುಗಳನ್ನು ಬದಲಿಸಲು 3 ಬಿಲ್‌ಗಳಿಗೆ ಒಪ್ಪಿಗೆ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...