ಪಪುವಾ ನ್ಯೂಗಿನಿಯಾದಲ್ಲಿ ಸಂಭವಿಸಿದ ಭಾರೀ ಭೂಕುಸಿತದಲ್ಲಿ 2000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ., ಹಲವಾರು ಮನೆಗಳು ಮತ್ತು ಅವುಗಳಲ್ಲಿ ಮಲಗಿದ್ದ ಜನರು ಮಣ್ಣಿನಡಿ ಜೀವಂತ ಸಮಾಧಿಯಾಗಿದ್ದಾರೆ.
ಸಂಕಷ್ಟದಲ್ಲಿರುವ ಪಪುವಾ ನ್ಯೂಗಿಯಾಕ್ಕೆ ಭಾರತ ಸಹಾಯದ ಹಸ್ತ ಚಾಚಿದೆ. ಸಂತ್ರಸ್ತರಿಗೆ ಭಾರತ ಸರ್ಕಾರ ಒಂದು ಮಿಲಿಯನ್ ಅಮೆರಿಕನ್ ಡಾಲರ್ (8.3 ಕೋಟಿ ರೂ) ತುರ್ತು ಆರ್ಥಿಕ ನೆರವನ್ನು ಘೋಷಿಸಿತ್ತು. ಇಂದು ವಿಶೇಷ ವಿಮಾನದ ಮೂಲಕ ವಿದೇಶಾಂಗ ಇಲಾಖೆ ಅಗತ್ಯ ಸಾಮಗ್ರಿಗಳನ್ನು ಪಾಪುವ ನ್ಯೂಗಿನಿಯಾಗೆ ಕಳುಹಿಸಿ ಕೊಟ್ಟಿದೆ.
ಪಪುವಾ ನ್ಯೂಗಿನಿಯಾದಲ್ಲಿ ಭೂಮಿ ಇನ್ನೂ ಜಾರುತ್ತಿದೆ, ಬಂಡೆಗಳು ಬೀಳುತ್ತಿವೆ, ನಿರಂತರ ಹೆಚ್ಚಿದ ಒತ್ತಡದಿಂದಾಗಿ ನೆಲದ ಮಣ್ಣು ಬಿರುಕು ಬಿಡುತ್ತಿದೆ ಮತ್ತು ಅಂತರ್ಜಲ ಹರಿಯುತ್ತಿದೆ, ಜನ ಸಹಾಯಹಸ್ತಕ್ಕಾಗಿ ಕೈ ಚಾಚುತ್ತಿದ್ದಾರೆ.