alex Certify ಭಾರತಕ್ಕೆ ವಿಶ್ವ ಮಟ್ಟದಲ್ಲಿ ಮತ್ತೊಂದು ಮುನ್ನಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತಕ್ಕೆ ವಿಶ್ವ ಮಟ್ಟದಲ್ಲಿ ಮತ್ತೊಂದು ಮುನ್ನಡೆ

ವಿಶ್ವ ಸಂಸ್ಥೆಯ ಜಾಗತಿಕ ಪಾರಂಪರಿಕ ಸಮಿತಿಗೆ ಭಾರತ ನಾಲ್ಕು ವರ್ಷಗಳ ಅವಧಿಗೆ ಆಯ್ಕೆಯಾಗಿದೆ. ವಿಶ್ವ ಸಂಸ್ಥೆಯ ಶೈಕ್ಷಣಿಕ ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ (ಯುನೆಸ್ಕೋ) ಕಾರ್ಯನಿರ್ವಾಹಕ ಮಂಡಳಿಗೆ ಭಾರತ ಮರು ಆಯ್ಕೆಯಾದ ಒಂದು ವಾರದ ಬಳಿಕ ಈ ಬೆಳವಣಿಗೆ ಘಟಿಸಿದೆ.

ವಿಶ್ವ ಪಾರಂಪರಿಕ ಸಮಿತಿಗೆ 142 ಮತಗಳನ್ನು ಪಡೆದು ಭಾರತ ಆಯ್ಕೆಯಾಗಿದೆ. 2021-2025 ರ ನಡುವಿನ ನಾಲ್ಕು ವರ್ಷಗಳ ಅವಧಿಗೆ ಭಾರತ ಈ ಸಮಿತಿಯ ಭಾಗವಾಗಿ ಇರಲಿದೆ.

ಮೇಲ್ಕಂಡ ಸಮಿತಿಯು ವಿಶ್ವ ಪಾರಂಪರಿಕ ನಿಧಿಯನ್ನು ಹಂಚುವ ಹೊಣೆ ಹೊಂದಿದ್ದು, ವಿಶ್ವ ಪಾರಂಪರಿಕ ತಾಣಗಳನ್ನು ನಿರ್ವಹಿಸಲು ದೇಶಗಳಿಗೆ ಆರ್ಥಿಕ ನೆರವು ನೀಡುತ್ತದೆ. ಸಮಿತಿಯು ವಿಶ್ವ ಪಾರಂಪರಿಕ ಸಭೆಯನ್ನು ಸಹ ನಿರ್ವಹಿಸುತ್ತದೆ.

ಭಾರತದ ರಾಯಭಾರ ವ್ಯವಸ್ಥೆಗೆ ಇದೊಂದು ಸುದಿನ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ತಿಳಿಸಿದ್ದಾರೆ. ಇದೇ ವೇಳೆ ಭಾರತದ ಪ್ರವೀಣ್ ಸಿನ್ಹಾರನ್ನು ಇಂಟರ್‌ಪೊಲ್‌ನ ಕಾರ್ಯನಿರ್ವಾಹಕ ಸಮಿತಿಗೆ ನೇಮಕ ಮಾಡಲಾಗಿದೆ ಎಂದು ಜೈಶಂಕರ್‌ ತಿಳಿಸಿದ್ದಾರೆ.

— India at UNESCO (@IndiaatUNESCO) November 25, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...