ಕೊರೊನಾ ನಿರೋಧಕ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದವರಿಗೆ ಆರು ತಿಂಗಳ ನಂತರ ಬೂಸ್ಟರ್ ಡೋಸ್ ನೀಡುವ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದರೂ ಕೂಡ , ಅದರ ಅಗತ್ಯತೆ ಬಗ್ಗೆ ಇನ್ನೂ ಸಾಕಷ್ಟು ಅಧ್ಯಯನ ವರದಿಗಳು ಲಭ್ಯವಿಲ್ಲಎಂದು ಲಸಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ ಮಧ್ಯಭಾಗದಲ್ಲಿಅಥವಾ ಅಕ್ಟೋಬರ್ ಮೊದಲ ಭಾಗದಲ್ಲಿ ದೇಶಾದ್ಯಂತ ಕೊರೊನಾ ಮೂರನೇ ಅಲೆಯು ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಗೃಹ ಸಚಿವಾಲಯದ ತಜ್ಞರ ಸಮಿತಿಯು ಈಗಾಗಲೇ ಪ್ರಧಾನಿ ಕಾರ್ಯಾಲಯಕ್ಕೆ ವರದಿ ನೀಡಿ ಎಚ್ಚರಿಸಿದೆ.
ಇನ್ನೊಂದೆಡೆ, ಬೂಸ್ಟರ್ ಡೋಸ್‌ಗಳು ಅಗತ್ಯ ಎಂದು ಎಸ್‌ಐಐ ಚೇರ್ಮನ್ ಸೈರಸ್ ಪೂನಾವಾಲ ಅವರು ಇತ್ತೀಚೆಗೆ ಪ್ರತಿಪಾದಿಸಿದ್ದಾರೆ. ಹಾಗಾಗಿ, ಲಸಿಕಾ ಅಭಿಯಾನದಲ್ಲಿಅಡಿಯಲ್ಲಿ ಬೂಸ್ಟರ್ ಡೋಸ್‌ಗಳನ್ನು ನೀಡುವ ಬಗ್ಗೆ ದೇಶದ ವಿವಿಧ ಭಾಗಗಳಿಂದ ಸ್ಥಳೀಯ ಸೋಂಕು ಪ್ರಸರಣದ ಮಾಹಿತಿ, ಪ್ರತಿಕಾಯಗಳ ಪ್ರಮಾಣದ ಅಧ್ಯಯನ ವರದಿ ಕಲೆಹಾಕಬೇಕಿದೆ. ನಂತರವೇ ಹೆಚ್ಚುವರಿ ಡೋಸ್‌ಗಳ ಬಗ್ಗೆ ನಿರ್ಧರಿಸಲಾಗುವುದು ಎಂದು ಕೊರೊನಾ ಕಾರ್ಯಪಡೆಯ ಮುಖ್ಯಸ್ಥ ಡಾ. ಎನ್.ಕೆ. ಅರೋರಾ ಹೇಳಿದ್ದಾರೆ.