ನವದೆಹಲಿ: ಕೊರೋನಾ ಸೋಂಕಿನಿಂದ ಪ್ರಾಣಿಗಳನ್ನು ರಕ್ಷಿಸಲು ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಕೊರೋನಾ ಲಸಿಕೆ ನೀಡಲಾಗುವುದು.
ಕೇಂದ್ರ ಸರ್ಕಾರದಿಂದ ಸೋಂಕು ನಿರೋಧಕ ಲಸಿಕೆ ‘ಅನೋಕೊವ್ಯಾಕ್ಸ್’ ಲಸಿಕೆಯನ್ನು ಪ್ರಾಣಿಗಳಿಗೆ ನೀಡಲು ಚಾಲನೆ ನೀಡಲಾಗಿದೆ. ಈ ಮೂಲಕ ದೇಶದಲ್ಲಿಯೇ ಮೊದಲ ಬಾರಿಗೆ ಪ್ರಾಣಿಗಳಿಗೂ ಕೊರೋನಾ ಲಸಿಕೆ ನೀಡಲಾಗುವುದು. ಹರಿಯಾಣದ ಐಸಿಎಆರ್ – ನ್ಯಾಷನಲ್ ರಿಸರ್ಚ್ ಸೆಂಟರ್ ಆನ್ ಈಕ್ವಿನ್ಸ್ ಸಂಸ್ಥೆ ಪ್ರಾಣಿಗಳಿಗಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ವರ್ಚುಯಲ್ ಮೂಲಕ ಲಸಿಕೆ ಬಿಡುಗಡೆ ಮಾಡಿದ್ದು, ಈ ಲಸಿಕೆಯನ್ನು ಪ್ರಾಣಿಗಳಿಗೆ ನೀಡಲಾಗುವುದು ಎಂದು ಹೇಳಲಾಗಿದೆ.