alex Certify ಭೂಕಂಪ ಪೀಡಿತ ಅಫ್ಘಾನಿಸ್ತಾನಕ್ಕೆ ನೆರವಿನ ಹಸ್ತ ಚಾಚಿದ ಭಾರತ: 27 ಟನ್ ತುರ್ತು ಪರಿಹಾರ ಸಾಮಗ್ರಿ ರವಾನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಕಂಪ ಪೀಡಿತ ಅಫ್ಘಾನಿಸ್ತಾನಕ್ಕೆ ನೆರವಿನ ಹಸ್ತ ಚಾಚಿದ ಭಾರತ: 27 ಟನ್ ತುರ್ತು ಪರಿಹಾರ ಸಾಮಗ್ರಿ ರವಾನೆ

ನವದೆಹಲಿ: ಪ್ರಬಲ ಭೂಕಂಪದಿಂದಾಗಿ ತತ್ತರಿಸಿದ ತಾಲಿಬಾನ್ ಆಡಳಿತದ ಆಫ್ಘಾನಿಸ್ತಾನದಲ್ಲಿ ಅಪಾರ ಪ್ರಮಾಣದ ಸಾವು, ನೋವು ಸಂಭವಿಸಿದ್ದು, ಸಂಕಷ್ಟದಲ್ಲಿರುವ ಜನರಿಗೆ ಭಾರತ ನೆರವಿನ ಹಸ್ತ ಚಾಚಿದೆ.

ಅಫ್ಘಾನಿಸ್ತಾನದ ಜನರಿಗೆ ಎರಡು ವಿಮಾನಗಳಲ್ಲಿ 27 ಟನ್ ತುರ್ತು ಪರಿಹಾರ ಸಾಮಗ್ರಿ ರವಾನಿಸಿದೆ. ಪರಿಹಾರ ನೆರವು, ರಿಡ್ಜ್ ಟೆಂಟ್‌ಗಳು, ಮಲಗುವ ಚಾಪೆ, ಚೀಲಗಳು, ಹೊದಿಕೆಗಳು, ದಿನಸಿ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ರವಾನಿಸಲಾಗಿದೆ.

ಪರಿಹಾರ ಸರಕನ್ನು ಕಾಬೂಲ್‌ ನಲ್ಲಿರುವ ಮಾನವೀಯ ವ್ಯವಹಾರಗಳ ಸಮನ್ವಯಕ್ಕಾಗಿ ವಿಶ್ವಸಂಸ್ಥೆಯ ಕಚೇರಿ ಮತ್ತು ಅಫ್ಘಾನ್ ರೆಡ್ ಕ್ರೆಸೆಂಟ್ ಸೊಸೈಟಿಗೆ ಹಸ್ತಾಂತರಿಸಲಾಗುವುದು. ಭಾರತವು ಶತಮಾನಗಳಷ್ಟು ಹಳೆಯ ಬಾಂಧವ್ಯವನ್ನು ಹೊಂದಿರುವ ಆಫ್ಘಾನಿಸ್ತಾನದ ಜನರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿದೆ. ಮತ್ತು ಆಫ್ಘನ್ ಜನರಿಗೆ ತಕ್ಷಣದ ಪರಿಹಾರ ನೆರವು ನೀಡಲು ಬದ್ಧವಾಗಿದೆ ಎಂದು ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...