ನವದೆಹಲಿ : ಈಗಾಗಲೇ ಯುಕೆ, ಫ್ರಾನ್ಸ್ ನಲ್ಲಿ ಕಾಡುತ್ತಿರುವ ಕೊರೊನಾ ರೂಪಾಂತರಿ ಓಮಿಕ್ರಾನ್ ಭಯ ದೇಶದಲ್ಲಿಯೂ ಶುರುವಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್, ಈಗಾಗಲೇ ಯುರೋಪ್ ಹಾಗೂ ಆಫ್ರಿಕಾದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗಿದೆ. ಅದೇ ರೀತಿಯ ವಾತಾವರಣ ದೇಶದಲ್ಲಿ ಸೃಷ್ಟಿಯಾದರೆ ಒಂದೇ ದಿನಕ್ಕೆ 14 ಲಕ್ಷದಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪೂರ್ಣ ಪ್ರಮಾಣದ ಲಸಿಕೆ ಪಡೆದ ವಯಸ್ಕರರಲ್ಲಿಯೂ ಡೆಲ್ಟಾ ಮತ್ತು ಒಮಿಕ್ರಾನ್ ಸೋಂಕು ಕಾಣಿಸಿಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ರೂಪಾಂತರಿಯ ಹಾವಳಿ ಹೆಚ್ಚಾಗಿದ್ದರಿಂದಾಗಿ ಯುಕೆನಲ್ಲಿ ಒಂದೇ ದಿನ 80 ಸಾವಿರ ಪ್ರಕರಣಗಳು ವರದಿಯಾಗಿವೆ. ಫ್ರಾನ್ಸ್ ನಲ್ಲಿ ಶೇ. 80ರಷ್ಟು ಜನರಿಗೆ ಲಸಿಕೆ ನೀಡಿದರೂ ಪ್ರತಿ ದಿನ 60 ಸಾವಿರದ ಆಸುಪಾಸಿನಲ್ಲಿ ಪ್ರಕರಣಗಳು ವರದಿಯಾಗುತ್ತಿವೆ.