ಪೆಂಟಗಾನ್ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಅರುಣಾಚಲ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ಚೀನಾಗೆ ಖಡಕ್ ಸಂದೇಶ ರವಾನಿಸಿದೆ.
ಈ ವಿಚಾರವಾಗಿ ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಾಗ್ಚಿ, ನೆರೆರಾಷ್ಟ್ರ ಚೀನಾ ದಶಕಗಳಿಂದ ಆಕ್ರಮಿಸಿಕೊಂಡಿರುವ ಪ್ರದೇಶಗಳನ್ನು ಒಳಗೊಂಡಂತೆ ಇನ್ನೂ ಅನೇಕ ಕಡೆಗಳಲ್ಲಿ ನಿರ್ಮಾಣ ಚಟುವಟಿಕೆಯನ್ನು ನಡೆಸುತ್ತಿದೆ. ಭಾರತವು ಇಂತಹ ಆಕ್ರಮಣಕಾರಿ ನೀತಿಯನ್ನು ಎಂದಿಗೂ ಸಹಿಸುವುದಿಲ್ಲ. ಇದು ನ್ಯಾಯಸಮ್ಮತವಾದ ಹಾದಿಯಲ್ಲ ಎಂದು ಹೇಳಿದ್ದಾರೆ.
ಪ್ರಾದೇಶಿಕ ಭದ್ರತೆ ಸಭೆಯಲ್ಲಿ ಪಾಕ್ ಗೈರಾದ ಹಿಂದಿನ ಕಾರಣ ಬಿಚ್ಚಿಟ್ಟ ಭಾರತ
ಈ ಬಗ್ಗೆ ಭಾರತವು ಈಗಾಗಲೇ ಚೀನಾಗೆ ಎಚ್ಚರಿಕೆಯನ್ನು ನೀಡುತ್ತಿದೆ ಹಾಗೂ ಮುಂದೆಯೂ ಎಚ್ಚರಿಕೆಯ ಸಂದೇಶ ನೀಡುವುದನ್ನು ಮುಂದವರಿಸುತ್ತದೆ ಎಂದೂ ಇದೇ ವೇಳೆ ಹೇಳಿದ್ರು.
ಮಿಲಿಟರಿ ಬೆಳವಣಿಗೆಗಳ ಕುರಿತಾದ ವಾರ್ಷಿಕ ಅಮೆರಿಕ ರಕ್ಷಣಾ ಇಲಾಖೆ ನೀಡುವ ವರದಿಯಲ್ಲಿ ಚೀನಾ ನಿರ್ಮಿಸುತ್ತಿರುವ ಈ ಗ್ರಾಮದ ಬಗ್ಗೆ ಉಲ್ಲೇಖವಿದೆ. ಎಲ್ಎಸಿಯುದ್ದಕ್ಕೂ ಎರಡು ದೇಶಗಳ ನಡುವಿನ ಉದ್ವಿಗ್ನತೆಯ ಮೇಲೆ ಚೀನಾ ಹದ್ದಿನ ಕಣ್ಣಿಟ್ಟಿದೆ.