alex Certify ನೆಟ್‌ ವರ್ಕ್ ಸನ್ನದ್ಧತೆ ಸೂಚ್ಯಂಕದಲ್ಲಿ ಆರು ಗ್ರೇಡ್​ ಮೇಲೇರಿದ ಭಾರತಕ್ಕೆ 61ನೇ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್‌ ವರ್ಕ್ ಸನ್ನದ್ಧತೆ ಸೂಚ್ಯಂಕದಲ್ಲಿ ಆರು ಗ್ರೇಡ್​ ಮೇಲೇರಿದ ಭಾರತಕ್ಕೆ 61ನೇ ಸ್ಥಾನ

ನ್ಯೂಯಾರ್ಕ್​: ಅಮೆರಿಕ ಮೂಲದ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಪೋರ್ಟುಲಾನ್ಸ್ ಇನ್‌ಸ್ಟಿಟ್ಯೂಟ್ ಸಿದ್ಧಪಡಿಸಿದ ನೆಟ್‌ವರ್ಕ್ ರೆಡಿನೆಸ್ ಇಂಡೆಕ್ಸ್ 2022 ವರದಿಯಲ್ಲಿ ಭಾರತವು ಆರು ಸ್ಥಾನಗಳಿಂದ ಮೇಲಕ್ಕೆ ಹೋಗಿದ್ದು, 61 ನೇ ಸ್ಥಾನಕ್ಕೆ ತಲುಪಿದೆ.

ಈ ಕುರಿತು ದೂರಸಂಪರ್ಕ ಸಚಿವಾಲಯ ಮಾಹಿತಿ ನೀಡಿದೆ. ದೇಶದ ಒಟ್ಟಾರೆ ಸ್ಕೋರ್ 2021 ರಲ್ಲಿ 49.74 ರಿಂದ 2022 ರಲ್ಲಿ 51.19 ಕ್ಕೆ ಸುಧಾರಿಸಿದೆ ಎಂದು ಸಚಿವಾಲಯವು ಹೇಳಿದೆ.

ಭಾರತವು ಕೃತಕ ಬುದ್ಧಿಮತ್ತೆ (‘AI) ಪ್ರತಿಭಾ ಕೇಂದ್ರೀಕರಣ’ದಲ್ಲಿ 1 ನೇ ಶ್ರೇಯಾಂಕವನ್ನು ಪಡೆದುಕೊಂಡಿದೆ. ದೇಶದೊಳಗಿನ ಮೊಬೈಲ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಟ್ರಾಫಿಕ್ ಮತ್ತು ಅಂತರರಾಷ್ಟ್ರೀಯ ಇಂಟರ್ನೆಟ್ ಬ್ಯಾಂಡ್‌ವಿಡ್ತ್ ನಲ್ಲಿ ಎರಡನೇ ಸ್ಥಾನ, ದೂರಸಂಪರ್ಕ ಸೇವೆಗಳಲ್ಲಿ ವಾರ್ಷಿಕ ಹೂಡಿಕೆ ಮತ್ತು’ದೇಶೀಯ ಮಾರುಕಟ್ಟೆ ಗಾತ್ರದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.

ಐಸಿಟಿ ಸೇವೆಗಳ ರಫ್ತುಗಳಲ್ಲಿ ನಾಲ್ಕನೇ ಶ್ರೇಣಿ, ‘FTTH/ಬಿಲ್ಡಿಂಗ್ ಇಂಟರ್ನೆಟ್ ಚಂದಾದಾರಿಕೆಗಳು ಮತ್ತು ಎಐ ವೈಜ್ಞಾನಿಕ ಪ್ರಕಟಣೆಗಳಲ್ಲಿ ಐದನೇ ಶ್ರೇಣಿ ಭಾರತಕ್ಕೆ ದಕ್ಕಿದೆ.

ಒಟ್ಟಾರೆ 80.3 ಅಂಕಗಳೊಂದಿಗೆ ಅಮೆರಿಕ ಅಗ್ರಸ್ಥಾನದಲ್ಲಿದೆ. 79.35 ಅಂಕಗಳೊಂದಿಗೆ ಸಿಂಗಪುರ ಮತ್ತು 78.91 ಅಂಕಗಳೊಂದಿಗೆ ಸ್ವೀಡನ್ ನಂತರದ ಸ್ಥಾನದಲ್ಲಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...