ನವದೆಹಲಿ: ‘ಇಂಡಿಯಾ’ ಹೆಸರು ಬದಲಾವಣೆ ಕೇವಲ ವದಂತಿ ಅಷ್ಟೇ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಕೇಂದ್ರ ಸಚಿವ ಅನುರಾಗ ಠಾಕೂರ್ ಈ ಬಗ್ಗೆ ಮಾತನಾಡಿದ್ದು, ದೇಶದ ಹೆಸರನ್ನು ಇಂಡಿಯಾ ಬದಲಾಗಿ ಭಾರತ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ವರದಿಗಳು ಕೇವಲ ವದಂತಿ ಅಷ್ಟೇ ಎಂದು ತಿಳಿಸಿದ್ದಾರೆ.
ಪ್ರೆಸಿಡೆಂಟ್ ಆಫ್ ಭಾರತ್ ಎಂದು ಬಳಸಿದ್ದಲ್ಲಿ ತಪ್ಪೇನು ಪಕ್ಷಗಳಿಗೆ ಬಾರತ ಎಂದರೆ ಅಲರ್ಜಿ ಆಗಿದೆ ಎಂದು ಟೀಕಿಸಿದ ಅವರು, ಭಾರತದ ರಾಷ್ಟ್ರಪತಿ ಎಂಬುದನ್ನು ಪ್ರೆಸಿಡೆಂಟ್ ಆಫ್ ಭಾರತ ಎಂದು ಬರೆಯಲಾಗಿದೆ. ಅದರಲ್ಲಿ ತಪ್ಪೇನಿದೆ? ಇದು ದೊಡ್ಡ ವಿಷಯವಲ್ಲ, ಈ ಮೊದಲು ಕೂಡ ಹಲವಾರು ಆಮಂತ್ರಣ ಪತ್ರಿಕೆಗಳಲ್ಲಿ ಭಾರತ ಸರ್ಕಾರ ಎಂದು ಬಳಸಲಾಗಿದೆ. ಹಿಂದಿನಿಂದಲೂ ಭಾರತ ಎಂಬುದು ಬಳಕೆಯಲ್ಲಿದೆ. ಆಗೆಲ್ಲ ಸಮಸ್ಯೆಯಾಗಿತ್ತಾ ಎಂದು ಪ್ರಶ್ನಿಸಿದ್ದಾರೆ.