
ಆಂಟಿಗುವಾ: ಹಾರ್ದಿಕ್ ಪಾಂಡ್ಯ ಅಜೇಯ ಅರ್ಧ ಶತಕದ ಜೊತೆಗೆ ಮಧ್ಯಮ ಮತ್ತು ಅಗ್ರ ಕ್ರಮಾಂಕದ ಬ್ಯಾಟರ್ ಗಳ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ಟಿ20 ವಿಶ್ವಕಪ್ 8ರ ಘಟ್ಟದ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 50 ರನ್ ಗಳ ಅಂತರದಿಂದ ಜಯಗಳಿಸಿದೆ.
ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ಶನಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ರೋಹಿತ್ ಶರ್ಮಾ 23, ವಿರಾಟ್ ಕೊಹ್ಲಿ 37, ರಿಷಬ್ ಪಂತ್ 36, ಶಿವಂ ದುಬೆ 34, ಹಾರ್ದಿಕ್ ಅಜೇಯ 50 ರನ್ ಗಳಿಸಿದರು. ಬಾಂಗ್ಲಾ ಪರ ರಿಷಾದ ಹೊಸೇನ್, ತನ್ಜಿಮ್ ತಲಾ ಎರಡು ವಿಕೆಟ್ ಪಡೆದರು.
197 ರನ್ ಗೆಲುವಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶ 20 ಓವರ್ ಗಳಲ್ಲಿ 8 ವಿಕೆಟ್ ಗೆ 146 ರನ್ ಗಳಿಸಿತು. ನಜ್ಮುಲ್ ಹೊಸೇನ್ 40, ರಿಷಾದ್ ಹೊಸೇನ್ 24, ತಂಜಿದ್ ಹಸನ್ 29 ರನ್ ಗಳಿಸಿದರು. ಭಾರತದ ಪರ ಆರ್ಷ್ ದೀಪ್ ಸಿಂಗ್ 2, ಬೂಮ್ರಾ 2, ಕುಲದೀಪ್ ಯಾದವ್ 3 ವಿಕೆಟ್ ಪಡೆದರು.