ಟೆಲಿಕಾಂ ಕಂಪನಿಯ ಉದ್ಯೋಗಿಗಳೆಂದು ಪೋಸ್ ಕೊಟ್ಟು ಕಳ್ಳರು 29 ಅಡಿ ಉದ್ದದ ಮೊಬೈಲ್ ಟವರ್ ಅನ್ನು ಕದ್ದೊಯ್ದಿದ್ದಾರೆ. ಪಾಟ್ನಾದ ಸಬ್ಜಿಬಾಗ್‌ನಲ್ಲಿ ಈ ಘಟನೆ ನಡೆದಿದೆ.
ದರೋಡೆಕೋರರ ಗುಂಪು ಟವರ್ ಕಿತ್ತುಹಾಕಿದ ಕಳ್ಳತನದ ದೃಶ್ಯದ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಪೊಲೀಸರಿಗೆ ಶಾಕ್ ನೀಡಿದ್ರೆ ಸ್ಥಳೀಯ ನಿವಾಸಿಗಳನ್ನು ಚಿಂತೆಗೀಡು ಮಾಡಿದೆ.
ಟೆಲಿಕಾಂ ಕಂಪನಿಯ ತಂತ್ರಜ್ಞರು ಮೊಬೈಲ್ ಟವರ್‌ಗಳು ಮತ್ತು 5G ಸೇವೆಗಳ ಸಮೀಕ್ಷೆಯನ್ನು ನಡೆಸುತ್ತಿರುವಾಗ ಅವರ ನೆಟ್‌ವರ್ಕ್ ಮತ್ತು ಅದರ ಉಪಕರಣಗಳು ಕಾಣೆಯಾದ ನಂತರ ಇದು ಬೆಳಕಿಗೆ ಬಂದಿತು.
ಶಾಹೀನ್ ಖಯೂಮ್ ಎಂಬ ವ್ಯಕ್ತಿಗೆ ಸೇರಿದ ನಾಲ್ಕು ಅಂತಸ್ತಿನ ಮನೆಯ ಛಾವಣಿಯ ಮೇಲೆ ಮೊಬೈಲ್ ಟವರ್ ಸ್ಥಾಪಿಸಲಾಗಿದೆ.
ಮೊಬೈಲ್ ಟವರ್ ಕಾಣೆಯಾಗಿದೆ ಎಂದು ಜಿಟಿಎಲ್‌ನ ಏರಿಯಾ ಮ್ಯಾನೇಜರ್ ಪೊಲೀಸರಿಗೆ ತಿಳಿಸಿದ ನಂತರ ಅಪರಿಚಿತ ಗುಂಪಿನ ವಿರುದ್ಧ ಐಪಿಸಿ ಸೆಕ್ಷನ್ 379 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಲ್ಲಿಯವರೆಗೆ ಅಪರಾಧಿಗಳ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ. ಟವರ್ ಅನ್ನು 2006 ರಲ್ಲಿ ಏರ್‌ಸೆಲ್ ಸ್ಥಾಪಿಸಿತ್ತು ಆದರೆ 2016 ರಲ್ಲಿ ಕಂಪನಿಯು ಜಿಟಿಎಲ್‌ಗೆ ಟವರ್ ಅನ್ನು ಮಾರಾಟ ಮಾಡಿದೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ.