ಇನ್ನು ಮುಂದೆ ಈಗ ತಾನೆ ಹುಟ್ಟಿದ ಮಕ್ಕಳಿಗೂ ಆಧಾರ್ ಕಾರ್ಡ್ ಸಂಖ್ಯೆ ಬರಲಿದೆ. ನವಜಾತ ಶಿಶುಗಳಿಗೆ ಸಿಗುತ್ತಿರುವ ಪ್ರಯೋಜನಗಳನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ನವಜಾತು ಶಿಶುಗಳಿಗೆ ತಾತ್ಕಾಲಿಕ ಆಧಾರ್ ಸಂಖ್ಯೆಯನ್ನು ನೀಡಲಾಗುತ್ತದೆ. ಮಗು ದೊಡ್ಡದಾದ ನಂತರ ಬಯೋಮೆಟ್ರಿಕ್ ದತ್ತಾಂಶವನ್ನು ಪಡೆದು ಶಾಶ್ವತ ಸಂಖ್ಯೆಯನ್ನು ನೀಡಲಾಗುತ್ತದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ದುರುಪಯೋಗವನ್ನು ತಪ್ಪಿಸುವುದು ಮತ್ತು ಆಧಾರ್ ಲಿಂಕ್ ಅನ್ನು ದೇಶಾದ್ಯಂತ ಮತ್ತಷ್ಟು ವಿಸ್ತರಣೆ ಮಾಡುವ ಉದ್ದೇಶದಿಂದ ವ್ಯಕ್ತಿಯ ಸಂಪೂರ್ಣ ಜೀವನಚಕ್ರದ ಡೇಟಾವನ್ನು ಆಧಾರ್ ಗೆ ಲಿಂಕ್ ಮಾಡಲಾಗುತ್ತಿದೆ. ಜನನದಿಂದ ಮರಣದವರೆಗೆ ಡೇಟಾವನ್ನು ಸಂಯೋಜನೆ ಮಾಡುವುದರಿಂದ ಕಲ್ಯಾಣ ಯೋಜನೆಗಳನ್ನು ಪಡೆಯಬಹುದಾಗಿದೆ ಮತ್ತು ಸಾಮಾಜಿಕ ಭದ್ರತಾ ಜಾಲದಿಂದ ಯಾರೂ ಹೊರಗುಳಿಯುವುದಿಲ್ಲ ಎಂಬುದು ಸರ್ಕಾರದ ನಂಬಿಕೆಯಾಗಿದೆ.
BIG BREAKING: ಒಂದೇ ದಿನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ದೇಶಾದ್ಯಂತ ಮತ್ತೆ ಹೆಚ್ಚುತ್ತಿದೆ ಆತಂಕ
ಜನನದ ವೇಳೆಯಲ್ಲಿ ಆಧಾರ್ ಸಂಖ್ಯೆಯನ್ನು ನಿಗದಿ ಮಾಡುವುದರಿಂದ ಮಕ್ಕಳು ಮತ್ತು ಅವರ ಕುಟುಂಬಗಳು ಸರ್ಕಾರದ ಕಾರ್ಯಕ್ರಮಗಳ ಪ್ರಯೋಜನವನ್ನು ಸುಲಭವಾಗಿ ಪಡೆಯಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಕ್ಕಳಿಗೆ ಐದು ವರ್ಷದ ತುಂಬಿದ ನಂತರ ಅವರ ಬಯೋಮೆಟ್ರಿಕ್ ಡೇಟಾವನ್ನು ದಾಖಲಿಸಲಾಗುತ್ತದೆ. ಆಧಾರ್ ಸಂಖ್ಯೆ ನೀಡುವ ಅಧಿಕಾರಿ/ಸಿಬ್ಬಂದಿ ತಂಡವು ಈ ನವಜಾತ ಶಿಶುಗಳ ಮನೆಗಳಿಗೆ ಹೋಗಿ ಬಯೋಮೆಟ್ರಿಕ್ ಡೇಟಾ ಸಂಗ್ರಹ ಮಾಡುತ್ತದೆ. ಈ ಪ್ರಕ್ರಿಯೆ ನಂತರ ಮಗುವಿಗೆ ಶಾಶ್ವತ ಆಧಾರ್ ಸಂಖ್ಯೆಯನ್ನು ನೀಡಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.