ನವದೆಹಲಿ: ಭಾರತ ಅನಿಲ ಉತ್ಪಾದನೆಯಲ್ಲಿ ಸಾಧನೆ ಮಾಡಿದೆ. ಪ್ರತಿ ದಿನಕ್ಕೆ 101 ಮಿಲಿಯನ್ ಮೆಟ್ರಿಕ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ ಗಳ ಮೈಲಿಗಲ್ಲನ್ನು ಸಾಧಿಸಿದೆ.
ಟ್ವೀಟ್‌ನಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಈ ಸಾಧನೆಯು ಭಾರತದ ಶಕ್ತಿ ಸೈನಿಕರ ಅವಿರತ ಪ್ರಯತ್ನಗಳು ಮತ್ತು ನೀತಿ ಸುಧಾರಣೆಗಳ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ. ಅನಿಲ ಆಧಾರಿತ ಆರ್ಥಿಕತೆಯತ್ತ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಭಾರತವು ತನ್ನ ನೈಸರ್ಗಿಕ ಅನಿಲದ ಅವಶ್ಯಕತೆಯ ಸುಮಾರು 50 ಪ್ರತಿಶತವನ್ನು ಆಮದು ಮಾಡಿಕೊಳ್ಳುವುದರಿಂದ, ದೇಶದಲ್ಲಿ ಹೆಚ್ಚಿದ ಅನಿಲ ಉತ್ಪಾದನೆಯು ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದು ಭಾರತೀಯ ನಾಗರಿಕರಿಗೆ ಸುಸ್ಥಿರ, ಕೈಗೆಟುಕುವ ಮತ್ತು ಸುರಕ್ಷಿತ ಇಂಧನ ಭವಿಷ್ಯದತ್ತ ಪ್ರಯತ್ನಗಳನ್ನು ಉತ್ತೇಜಿಸುತ್ತದೆ ಎಂದು ಹೇಳಿದ್ದಾರೆ.