ಮಕ್ಕಳಿಗೆ ಬಾಹ್ಯಾಕಾಶ ವಿಜ್ಞಾನವನ್ನು ಉತ್ತೇಜಿಸಲು ಹೆಸರುವಾಸಿಯಾದ ಸಂಸ್ಥೆಯಾದ ಸ್ಪೇಸ್ ಕಿಡ್ಜ್ ಇಂಡಿಯಾ ಭಾರತೀಯ ತ್ರಿವರ್ಣ ಧ್ವಜವನ್ನು ಭೂಮಿಯಿಂದ ಸುಮಾರು 30 ಕಿಲೋಮೀಟರ್ ಎತ್ತರದಲ್ಲಿ ಹಾರಿಸಿದೆ.
ʼಹರ್ ಘರ್ ತಿರಂಗಾʼ ಅಭಿಯಾನದ ಭಾಗವಾಗಿ ನಡೆದ ಈ ಪ್ರಯತ್ನ ವಿಶ್ವದ ಗಮನ ಸೆಳೆದಿದೆ. ಧ್ವಜವನ್ನು ಬಲೂನ್ ನಲ್ಲಿ ಭೂಮಿಯಿಂದ 1,06,000 ಅಡಿ ಎತ್ತರಕ್ಕೆ ಕಳುಹಿಸಲಾಯಿತು.
“ಭೂಮಿಯ ಮೇಲೆ ಧ್ವಜವನ್ನು ಹಾರಾಡಿಸುವುದು ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸೂಚಿಸುತ್ತದೆ ಮತ್ತು ಪ್ರತಿದಿನ ಭಾರತವನ್ನು ಹೆಮ್ಮೆಪಡುವಂತೆ ಮಾಡಲು ಕೆಲಸ ಮಾಡುತ್ತಿರುವವರಿಗಾಗಿ ಈ ಪ್ರಯತ್ನ” ಎಂದು ಎಂದು ಸಂಸ್ಥೆಯು ಹೇಳಿಕೊಂಡಿದೆ.
ಸ್ಪೇಸ್ ಕಿಡ್ಜ್ ಇಂಡಿಯಾ ಇತ್ತೀಚೆಗೆ ಉಪಗ್ರಹವನ್ನು ಕಕ್ಷೆಗೆ ಉಡಾಯಿಸಿತು. ಈ ಮಧ್ಯೆ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗುರುತಿಸಲು ಬಾಹ್ಯಾಕಾಶದಿಂದ ಸಂದೇಶಗಳು ಹರಿದುಬರುತ್ತಿವೆ, ಐಎಸ್ಎಸ್ನಲಿರುವ ಗಗನಯಾತ್ರಿ ಸಮಂತಾ ಕ್ರಿಸ್ಟೋಫೊರೆಟ್ಟಿ ಅವರು ವಿಡಿಯೊದಲ್ಲಿ “75 ನೇ ಸ್ವಾತಂತ್ರ್ಯ ಸಂಭ್ರಮದಲ್ಲಿರುವ ಭಾರತವನ್ನು ಅಭಿನಂದಿಸಲು ಸಂತೋಷವಾಗಿದೆ. ದಶಕಗಳಿಂದ ಅಂತರರಾಷ್ಟ್ರೀಯ ಸಂಸ್ಥೆಗಳು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಂದಿಗೆ ಬಾಹ್ಯಾಕಾಶ ಮತ್ತು ವಿಜ್ಞಾನ ಮಿಷನ್ಗಳಲ್ಲಿ ಕೆಲಸ ಮಾಡಿದ್ದೇವೆ” ಎಂದು ಸಂದೇಶ ಕಳಿಸಿದ್ದಾರೆ.
ಭಾರತೀಯ- ಅಮೆರಿಕನ್ ಗಗನಯಾತ್ರಿ ರಾಜಾಚಾರಿ ಭಾರತವನ್ನು ಅಭಿನಂದಿಸಿದ್ದಾರೆ ಮತ್ತು “ನಾಸಾ ಮತ್ತು ಇಸ್ರೋ ಸಹಕಾರದ ಸುದೀರ್ಘ ಇತಿಹಾಸವನ್ನು ಹೊಂದಿವೆ, ನಾವು ಜಂಟಿ ಬಾಹ್ಯಾಕಾಶ ಮತ್ತು ಭೂ ವಿಜ್ಞಾನ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುತ್ತಿರುವುದರಿಂದ ಸಹಕಾರವು ಇಂದಿಗೂ ಮುಂದುವರಿಯುತ್ತದೆ ಎಂದಿದ್ದಾರೆ.