ಬೆಂಗಳೂರು: ನೇಮಕಾತಿ ಪ್ರಕ್ರಿಯೆಯನ್ನು ಸರಳ ಮತ್ತು ವೇಗವಾಗಿಸಲು ಹೊಸ ಕೃತಕ ಬುದ್ಧಿಮತ್ತೆ ಚಾಲಿತ ಉತ್ಪನ್ನ ಬಿಡುಗಡೆ ಮಾಡಲಾಗುವುದು ಎಂದು ಜಾಗತಿಕ ಉದ್ಯೋಗ ಹೊಂದಾಣಿಕೆ ಮತ್ತು ನೇಮಕಾತಿ ವೇದಿಕೆ ಹಾಗೂ ನೇಮಕಾತಿ ಹೋಲ್ಡಿಂಗ್ ಅಂಗ ಸಂಸ್ಥೆ ಇಂಡೀಡ್ ಘೋಷಣೆ ಮಾಡಿದೆ.
ಸುಮಾರು 30 ಕೋಟಿ ಪ್ರೊಫೈಲ್ ಗಳನ್ನು ಇಂಡೀಡ್ ನಲ್ಲಿ ಹಂಚಿಕೊಳ್ಳಬಹುದಾಗಿದೆ. ಉದ್ಯೋಗದಾತರು ತಮ್ಮ ಸಂಸ್ಥೆಗಳಿಗೆ ಹೊಂದಾಣಿಕೆಯಾಗುವ ಅಭ್ಯರ್ಥಿಗಳನ್ನು ಶೀಘ್ರವಾಗಿ ಪರಿಶೀಲಿಸಲು ಇದರಿಂದ ಅನುಕೂಲವಾಗುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ನೇರವಾಗಿ ಸಂಪರ್ಕ ಸಾಧಿಸಿ ನೇಮಕಾತಿ ಪಡೆಯಬಹುದು. ಇಂಡೀಡ್ ಹಿರಿಯ ಉತ್ಪನ್ನ ನಿರ್ದೇಶಕ ಅಭಿಷೇಕ್ ಮಾಹಿತಿ ನೀಡಿ, ಭಾರತದಲ್ಲಿ ಉದ್ಯೋಗ ಮತ್ತು ನೇಮಕಾತಿಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಸ್ಮಾರ್ಟ್ ಸೋರ್ಸಿಂಗ್ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.