ಮೊಹಾಲಿಯಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ ಪ್ರಾಬಲ್ಯ ಸಾಧಿಸುತ್ತಿದೆ. ಈ ಟೆಸ್ಟ್ ಪಂದ್ಯವು ವಿರಾಟ್ ಕೊಹ್ಲಿಯ 100 ನೇ ಪಂದ್ಯವಾಗಿದ್ದು, ಮಾಜಿ ನಾಯಕನಿಗೆ ವಿಶೇಷವಾಗಿದೆ.
ನೂರು ಟೆಸ್ಟ್ ಪಂದ್ಯಗಳನ್ನಾಡಿ ದಾಖಲೆ ಬರೆದ ಕೊಹ್ಲಿಗೆ ಪಂದ್ಯದ ಆರಂಭಕ್ಕೂ ಮುನ್ನ ಬಿಸಿಸಿಐ ಸನ್ಮಾನ ಸಲ್ಲಿಸಿತ್ತು. ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕ್ಯಾಪ್ ಮತ್ತು ಮೊಮೆಂಟೊ ನೀಡುವ ಮೂಲಕ ಮಾಜಿ ನಾಯಕನಿಗೆ ಗೌರವ ಸಲ್ಲಿಸಿದ್ರು. ಅದಕ್ಕೂ ಮೊದಲು ವಿರಾಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಬಿಪಿಎಲ್ ಕಾರ್ಡ್ ದಾರರಿಗೆ ಮುಖ್ಯ ಮಾಹಿತಿ: ಏ. 1 ರಿಂದ ಸಾರವರ್ಧಿತ ಅಕ್ಕಿ ವಿತರಣೆ, ಮನೆ ಬಾಗಿಲಿಗೆ ರೇಷನ್ ಕೈಬಿಟ್ಟ ಸರ್ಕಾರ
ವಿರಾಟ್ ಈ ಪಂದ್ಯದಲ್ಲಿ ಒಳ್ಳೆ ಇನ್ನಿಂಗ್ಸ್ ಮೂಲಕ ಈ ದಾಖಲೆಯ ದಿನವನ್ನು ಸ್ಮರಣೀಯವಾಗಿಸಲು ಸಾಧ್ಯವಾಗದಿದ್ದರೂ, ಭಾರತ ತಂಡದ ಹೊಸ ಆಲ್-ಫಾರ್ಮ್ಯಾಟ್ ನಾಯಕ ರೋಹಿತ್ ಶರ್ಮಾ ಅವರು ಮತ್ತು ತಂಡದ ಉಳಿದ ಆಟಗಾರರು ವಿರಾಟ್ ಕೊಹ್ಲಿಗೆ ಗಾರ್ಡ್ ಆಫ್ ಆನರ್ ನೀಡಿದ್ದಾರೆ.
ಹೌದು, ಟೀಮ್ ಇಂಡಿಯಾ ಮಾಜಿ ನಾಯಕನ ಸಾಧನೆಯನ್ನು ಗಾರ್ಡ್ ಆಫ್ ಆನರ್ ನೀಡುವ ಮೂಲಕ ಸಂಭ್ರಮಿಸಿದೆ. ಮೊಹಾಲಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಎರಡನೇ ದಿನದ ಅಂತಿಮ ಸೆಷನ್‌ನ ಆಟ ಪ್ರಾರಂಭವಾಗುವ ಮೊದಲು ಇದು ಸಂಭವಿಸಿದೆ. ಕೊಹ್ಲಿಗೆ ಟೀಮ್ ಇಂಡಿಯಾದ ಈ ನಡೆ ಸರ್ಪ್ರೈಸ್ ನೀಡಿರೋದಂತು ಹೌದು. ತಮ್ಮ ಸಹ ಆಟಗಾರರಿಂದ ದೊರೆತ ಸನ್ಮಾನಕ್ಕೆ ಕೊಹ್ಲಿ ಧನ್ಯವಾದ ಅರ್ಪಿಸಿದ್ದಾರೆ.