ಪಲೆಕೆಲೆ: ಶ್ರೀಲಂಕಾ ಎದುರಿನ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಸೂಪರ್ ಓವರ್ ನಲ್ಲಿ ಜಯಗಳಿಸಿದ್ದು, 3-0 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿದೆ.
ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್, ಪೂರ್ಣಾವಧಿ ನಾಯಕರಾಗಿ ಸೂರ್ಯಕುಮಾರ್ ಯಾದವ್ ಅವರಿಗೆ ಮೊದಲ ಸರಣಿಯಲ್ಲಿ ಭರ್ಜರಿ ಯಶಸ್ಸು ದೊರೆತಿದೆ.
ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಭಾರತ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಗೆ 137 ರನ್ ಗಳಿಸಿತು. ಭಾರತದ ಪರ ಶುಭಮನ್ ಗಿಲ್ 39, ರಿಯಾನ್ ಪರಾಗ್ 26, ವಾಷಿಂಗ್ಟನ್ ಸುಂದರ್ 25 ರನ್ ಗಳಿಸಿದರು. ಲಂಕಾ ಪರ ಮಹಿಷಾ ತೀಕ್ಷ್ಣ ಮೂರು ವಿಕೆಟ್, ವನಿಂದು ಹಸರಂಗ ಎರಡು ವಿಕೆಟ್ ಪಡೆದರು.
ಗೆಲುವಿನ ಗುರಿ ಬೆನ್ನತ್ತಿದ ಶ್ರೀಲಂಕಾ 20 ಓವರ್ ಗಳಲ್ಲಿ 8 ವಿಕೆಟ್ ಗೆ 137 ರನ್ ಗಳಿಸಿತು. ಶ್ರೀಲಂಕಾ ಪರ ಕುಶಾಲ್ ಪೆರೆರಾ 46, ಕುಶಾಲ್ ಮೆಂಡಿಸ್ 43 ವಿಕೆಟ್ ರನ್ ಗಳಿಸಿದರು. ಭಾರತದ ಪರ ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ರಿಂಕು ಸಿಂಗ್, ಸೂರ್ಯ ಕುಮಾರ್ ತಲಾ ಎರಡು ವಿಕೆಟ್ ಪಡೆದರು.
ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ತಂಡ ಎರಡು ರನ್ ಗಳಿಸಿದ್ದು, ಸೂರ್ಯ ಕುಮಾರ್ ಬೌಂಡರಿಯೊಂದಿಗೆ ಜಯಭೇರಿ ಬಾರಿಸಿದರು.