ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮೇಲುಗೈ ಸಾಧಿಸಿರುವ ಭಾರತ ತಂಡ, ಪಂದ್ಯದ ಗೆಲ್ಲಲು ಐದನೇ ದಿನದಂದು ಎದುರಾಳಿಗಳ ಆರು ವಿಕೆಟ್‌ಗಳನ್ನು ಪಡೆಯಬೇಕಿದೆ.
ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ಇನಿಂಗ್ಸ್‌ನಲ್ಲಿ ಗೆಲ್ಲಲು 305 ರನ್‌ಗಳ ಗುರಿ ಬೆನ್ನತ್ತಿರುವ ಆತಿಥೇಯ ತಂಡದ ಪರ ನಾಯಕ ಡೀನ್ ಎಲ್ಗರ್ 52 ರನ್ ಗಳಿಸಿ ಇಂದಿನ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರೂ, ಮತ್ತೊಂದು ಬದಿಯಲ್ಲಿ ತಂಡದ ಮೊತ್ತ 94ರನ್ ಗಳಾಗುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಪತನವಾಗುವುದಕ್ಕೆ ಸಾಕ್ಷಿಯಾಗಿದ್ದಾರೆ.
ನೆಚ್ಚಿನ ನಟನ ನೋಡಲು ಮುಗಿಬಿದ್ದ ಫ್ಯಾನ್ಸ್: ಜನನಿಬಿಡ ಪ್ರದೇಶದಲ್ಲಿ ಐಷಾರಾಮಿ ಕಾರ್ ಬಿಟ್ಟು ಸಲ್ಮಾನ್ ಖಾನ್ ಆಟೋ ಚಾಲನೆ
ಇದಕ್ಕೂ ಮುನ್ನ, ತನ್ನ ಎರಡನೇ ಇನಿಂಗ್ಸ್‌ನಲ್ಲಿ 174ರನ್‌ಗಳಿಗೆ ಸರ್ವಪತನ ಕಂಡ ಭಾರತ, ಮೊದಲ ಇನಿಂಗ್ಸ್‌ನ 130ರನ್ ಮುನ್ನಡೆ ಸೇರಿದಂತೆ, ಆತಿಥೇಯರಿಗೆ 305ರನ್ ಗುರಿ ನೀಡಿದೆ. ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ಕೆ.ಎಲ್. ರಾಹುಲ್ ಈ ಬಾರಿ 23 ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರಾ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರಹಾನೆ ತಮಗೆ ಲಭಿಸಿದ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗಿದ್ದಾರೆ. ರಿಶಬ್ ಪಂತ್ ಚುರುಕಾಗಿ 34 ರನ್‌ಗಳಿಸುವ ಮೂಲಕ ಭಾರತ ತಂಡದ ಮುನ್ನಡೆ 300 ದಾಟುವಂತೆ ನೋಡಿಕೊಂಡಿದ್ದಾರೆ.
ಪಿಚ್‌ನಲ್ಲಿ ಸಾಕಷ್ಟು ಬಿರುಕುಗಳು ಕಂಡಿದ್ದು, ಚೆಂಡಿನ ಪುಟಿತದಲ್ಲಿ ಭಾರೀ ಏರಿಳಿತಗಳು ಇರುವ ಕಾರಣ 305ರನ್‌ಗಳ ಮೊತ್ತ ಸುರಕ್ಷಿತವೆಂದೇ ತಜ್ಞರು ತಿಳಿಸಿದ್ದಾರೆ. ಇಂಥ ಪರಿಸ್ಥಿತಿಗಳ ನಡುವೆಯೂ ಆತಿಥೇಯರು ಅಪ್ರತಿಮ ಆಟದ ಮೂಲಕ ಪಂದ್ಯವನ್ನು ಗೆಲ್ಲುವ, ಅಥವಾ ಉಳಿಸಿಕೊಳ್ಳುವ ಭರದಲ್ಲಿ ಯಶ ಕಾಣಲಿದ್ದಾರಾ ಇಂದು ನೋಡಬೇಕು.