ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023 ರಲ್ಲಿ ಭಾರತ ಮತ್ತು ಪಾಕಿಸ್ತಾನ ಶನಿವಾರ (ಅಕ್ಟೋಬರ್ 14) ಪರಸ್ಪರ ಮುಖಾಮುಖಿಯಾಗಲಿವೆ. ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.
ಕಳೆದ ಒಂದು ದಶಕದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾರತದ ನೆಲದಲ್ಲಿ ಏಕದಿನ ಪಂದ್ಯಗಳನ್ನು ಆಡಿಲ್ಲ. ಇದಲ್ಲದೆ, ಪ್ರಸ್ತುತ ವಿಶ್ವಕಪ್ನಲ್ಲಿ ಎರಡೂ ತಂಡಗಳು ತುಂಬಾ ಪ್ರಬಲವಾಗಿವೆ. ಎರಡೂ ತಂಡಗಳು ತಲಾ ಎರಡು ಪಂದ್ಯಗಳನ್ನು ಗೆದ್ದಿದ್ದು, ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟಿವೆ. ಆದ್ದರಿಂದ ಎಲ್ಲರ ಕಣ್ಣು ಶನಿವಾರದ ಪಂದ್ಯದ ಮೇಲೆ ನೆಟ್ಟಿದೆ.
ಈ ವರ್ಷ ಭಾರತ ಮತ್ತು ಪಾಕಿಸ್ತಾನ ಏಕದಿನ ಪಂದ್ಯಗಳಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿ. ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ 2023 ರಲ್ಲಿ, ಭಾರತ-ಪಾಕ್ ನಡುವೆ ಎರಡು ಪಂದ್ಯಗಳು ನಡೆದವು. ಆದರೆ, ಈ ಎರಡೂ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿತು. ಆದಾಗ್ಯೂ, ಅಹಮದಾಬಾದ್ನಲ್ಲಿ ಶನಿವಾರ (ಅಕ್ಟೋಬರ್ 14) ಮಳೆಯಾಗುವ ಸಾಧ್ಯತೆಗಳು ಬಹುತೇಕ ಕಡಿಮೆ. ಅಹ್ಮದಾಬಾದ್ ನ ಅಕ್ಯೂವೆದರ್ ವರದಿಯ ಪ್ರಕಾರ. ಶೇ.14ರಷ್ಟು ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗುವ ಸಾಧ್ಯತೆ ಇಲ್ಲ. ಭಾರತ ಮತ್ತು ಪಾಕಿಸ್ತಾನ ನಡುವೆ ಮಧ್ಯಾಹ್ನ 2 ಗಂಟೆಗೆ ಶುರುವಾಗಲಿದೆ.
ಟಾಸ್ ಮಧ್ಯಾಹ್ನ 1:30 ಕ್ಕೆ ನಡೆಯಲಿದೆ. ಇದಕ್ಕೂ ಒಂದು ಗಂಟೆ ಮೊದಲು ಮಧ್ಯಾಹ್ನ 12.30 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ಪ್ರೇಕ್ಷಕರಿಗೆ ಕ್ರೀಡಾಂಗಣದ ಒಳಗೆ ಪ್ರವೇಶ ನೀಡಲಾಗುವುದು. ಅಹಮದಾಬಾದ್ನಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರಲಿದೆ ಎಂದು ನಿರೀಕ್ಷಿಸಲಾಗಿದೆ. ಮಧ್ಯಾಹ್ನ 1:30 ಕ್ಕೆ ಪಂದ್ಯ ಪ್ರಾರಂಭವಾದಾಗ ತಾಪಮಾನವು ಸ್ವಲ್ಪ ಕಡಿಮೆಯಾಗುತ್ತದೆ. ಆದಾಗ್ಯೂ, ತೇವಾಂಶವು ಉತ್ತಮವಾಗಿದೆ. ಅದರ ನಂತರ ಹವಾಮಾನವು ತಂಪಾಗಿರುತ್ತದೆ. ಮೋಡ ಕವಿದ ವಾತಾವರಣವಿದ್ದರೂ ಮಳೆಯಾಗುವ ಸಾಧ್ಯತೆ ಇಲ್ಲ.