ಭಾರತ – ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಪಂದ್ಯವಿದೆ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗೋದು ಭಾರತೀಯ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ. ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಮದುವೆಯಾದ್ಮೇಲೆ, ಭಾರತ – ಪಾಕ್ ಕ್ರಿಕೆಟ್ ವಿಷ್ಯ ಬಂದಾಗ ಎಲ್ಲರ ಕಣ್ಣು ಸಾನಿಯಾ ಮೇಲೆ ಹೋಗುತ್ತೆ. ಸದ್ಯ ಸಾನಿಯಾ, ಶೋಯೆಬ್ ಮಲ್ಲಿಕ್ ಜೊತೆಗಿದ್ದಾರೆ.
ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಪಾಕ್ ಇನ್ನೂ ಅಭಿಯಾನ ಶುರು ಮಾಡಿಲ್ಲ. ಇದಕ್ಕೂ ಮೊದಲೇ ಸಾನಿಯಾ ಮಿರ್ಜಾ, ಬಯೋ ಬಬಲ್ ಪ್ರವೇಶ ಮಾಡಿದ್ದಾರೆ. ಇದಕ್ಕೂ ಮುನ್ನ, ಸಾನಿಯಾ ಮಿರ್ಜಾ ಟೆನಿಸ್ ಪಂದ್ಯದ ಫೋಟೋ ಪೋಸ್ಟ್ ಮಾಡಿದ್ದರು. ಇದಾದ ನಂತ್ರ ಈಗ ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಸಾನಿಯಾ ಗಾಯಬ್ ಆಗ್ತಾರೆ. ಈ ವಿಡಿಯೋ ಜೊತೆ ಸಾನಿಯಾ, ಭಾರತ – ಪಾಕಿಸ್ತಾನ ಕ್ರಿಕೆಟ್ ಪಂದ್ಯದ ದಿನ ಸಾಮಾಜಿಕ ಜಾಲತಾಣದಿಂದ ದೂರವಿರುವುದಾಗಿ ಹೇಳಿದ್ದಾರೆ.
ಭಾರತ – ಪಾಕ್ ಪಂದ್ಯ ಅಕ್ಟೋಬರ್ 24 ರಂದು ಭಾನುವಾರ ನಡೆಯಲಿದೆ. ಪಂದ್ಯ ವೀಕ್ಷಣೆಗೆ ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿದ್ದಾರೆ.
https://youtu.be/zj1ft4FhLdg