ಐಪಿಎಲ್ ಹಾಗೂ ದೇಸೀ ಕ್ರಿಕೆಟ್‌ನಲ್ಲಿ ಸುದೀರ್ಘಾವಧಿಗೆ ಸ್ಥಿರ ಪ್ರದರ್ಶನ ನೀಡುತ್ತಾ ಕೊನೆಗೂ ಟೀಂ ಇಂಡಿಯಾ ಸೇರಿಕೊಂಡಿರುವ ಸೂರ್ಯ ಕುಮಾರ್ ಮೈದಾನ ಹಾಗೂ ಮೈದಾನದ ಹೊರಗೂ ಭಾರೀ ಚುರುಕಾಗಿರುತ್ತಾರೆ.
ಪತ್ನಿ ಪರಾರಿಯಾಗಿದ್ದಕ್ಕೆ ಅಳಿಯನಿಂದ ಆಘಾತಕಾರಿ ಕೃತ್ಯ: ತವರಿನವರ ಬೆದರಿಸಿ ಕುದಿಯುವ ಎಣ್ಣೆಗೆ ಕೈಹಾಕಿಸಿದ ಕಿಡಿಗೇಡಿ
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಯನ್ನು ಸಿಕ್ಸರ್‌ನಿಂದ ಆರಂಭಿಸಿದ ಸೂರ್ಯ ಕುಮಾರ್ ಯಾದವ್, ಸಾಮಾಜಿಕ ಜಾಲತಾಣದಲ್ಲೂ ಸಹ ಸಿಕ್ಸರ್ ಮೇಲೆ ಸಿಕ್ಸರ್ ಬಾರಿಸುತ್ತಾ ಇರುತ್ತಾರೆ.
ಟೀಂ ಇಂಡಿಯಾ ಹಾಗೂ ಮುಂಬಯಿ ತಂಡದಲ್ಲಿ ತಮ್ಮ ಸಹ ಆಟಗಾರನಾದ ಪೃಥ್ವಿ ಶಾ ಜೊತೆ ಸೇರಿರುವ ಸೂರ್ಯ, ಬಾಲಿವುಡ್‌ನ ’ಅಂದಾಜ಼್ ಅಪ್ನಾ ಅಪ್ನಾ’ ಕ್ಲಾಸಿಕ್ ಚಿತ್ರದ ಸೀನ್ ಒಂದರ ಅಣಕು ನಟನೆ ಮಾಡಿದ್ದಾರೆ. ಚಿತ್ರದ ಡೈಲಾಗ್ ಒಂದರ ಜೊತೆಗೆ ಈ ವಿಡಿಯೋವನ್ನು ಸೂರ್ಯ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
https://www.youtube.com/watch?v=jVU_YArcRO4