alex Certify ಭಾರತ -ಇಂಗ್ಲೆಂಡ್ ಪಂದ್ಯದ ವೇಳೆ ಭಾರೀ ಬೆಟ್ಟಿಂಗ್: 33 ಬುಕ್ಕಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತ -ಇಂಗ್ಲೆಂಡ್ ಪಂದ್ಯದ ವೇಳೆ ಭಾರೀ ಬೆಟ್ಟಿಂಗ್: 33 ಬುಕ್ಕಿಗಳು ಅರೆಸ್ಟ್

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ಎರಡನೇ ಏಕದಿನ ಪಂದ್ಯ ನಡೆಯುವ ಸಂದರ್ಭದಲ್ಲಿ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಬರೋಬ್ಬರಿ 33 ಬುಕ್ಕಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪಿಂಪ್ರಿ ಚಿಂಚವಾಡ ಪೊಲೀಸರು ಕಾರ್ಯಾಚರಣೆ ನಡೆಸಿ ಬುಕ್ಕಿಗಳನ್ನು ಬಂಧಿಸಿದ್ದಾರೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ಪಂದ್ಯ ನಡೆಯುವ ಸಂದರ್ಭದಲ್ಲಿ ಕೆಲವರು ಬೈನಾಕ್ಯುಲರ್ ಮೂಲಕ ಪಂದ್ಯ ವೀಕ್ಷಿಸುತ್ತಾ ಬೆಟ್ಟಿಂಗ್ ನಡೆಸಲು ಬುಕ್ಕಿಗಳಿಗೆ ನೆರವಾಗುತ್ತಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮೈದಾನದಲ್ಲಿಯೇ ಹಲವೆಡೆ ಏಕಕಾಲಕ್ಕೆ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಾಹಿತಿ ಅನ್ವಯ 33 ಬುಕ್ಕಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತರಿಂದ 45 ಲಕ್ಷ ರೂಪಾಯಿ ನಗದು, 74 ಮೊಬೈಲ್, 8 ಹೈರೆಸೂಲಷನ್ ಕ್ಯಾಮೆರಾ, ಬೈನಾಕ್ಯುಲರ್, ವಿದೇಶಿ ಕರೆನ್ಸಿ ವಶಕ್ಕೆ ಪಡೆಯಲಾಗಿದೆ. ಬಂಧಿತರದಲ್ಲಿ ಹರಿಯಾಣ, ಮಹಾರಾಷ್ಟ್ರ, ರಾಜಸ್ಥಾನ, ಗೋವಾ ಹಾಗೂ ಉತ್ತರ ಪ್ರದೇಶದವರು ಕೂಡ ಸೇರಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...