ಭಾರತ – ಆಸ್ಟ್ರೇಲಿಯಾ ವಿಶ್ವಕಪ್ 2023 ಫೈನಲ್‌ಗೆ ಮುಂಚಿತವಾಗಿ ಭಾರತೀಯ ರೈಲ್ವೇಯು ಶನಿವಾರ ನವದೆಹಲಿ ಮತ್ತು ಮುಂಬೈನಿಂದ ಅಹಮದಾಬಾದ್‌ಗೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
ಭಾನುವಾರ (ನವೆಂಬರ್ 19) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಹೆಚ್ಚಿನ ನೂಕುನುಗ್ಗಲು ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಉಪಕ್ರಮವು 20,000 ರಿಂದ 40,000 ರೂ. ರವರೆಗಿನ ಮಿತಿಮೀರಿದ ವಿಮಾನ ದರಗಳೊಂದಿಗೆ ಹೋರಾಡುತ್ತಿದ್ದ ಅಭಿಮಾನಿಗಳಿಗೆ ಪರಿಹಾರವಾಗಿದೆ. ಈ ರೈಲಿನಲ್ಲಿ ವಿಮಾನ ದರಕ್ಕಿಂತ ಕಡಿಮೆ ದರದಲ್ಲಿ ಸೀಟುಗಳನ್ನು ನೀಡಲಾಗಿದ್ದು, ಸ್ಲೀಪರ್ ಸೀಟ್ ಗೆ 620 ರಿಂದ 1ನೇ ಎಸಿ ಸೀಟ್‌ಗೆ 3490 ರೂ. 3AC ಎಕಾನಮಿ ಮತ್ತು 3AC ಸೀಟ್‌ಗಳ ಬೆಲೆ ಕ್ರಮವಾಗಿ 1525 ಮತ್ತು 1665 ರೂ.
ರೈಲು ದೆಹಲಿಯಿಂದ ಸಂಜೆ 5 ಗಂಟೆಗೆ ಹೊರಟು ನಾಳೆ ಬೆಳಿಗ್ಗೆ 7.15 ರ ಸುಮಾರಿಗೆ ಅಹಮದಾಬಾದ್ ತಲುಪಲಿದೆ. ಪಂದ್ಯದ ನಂತರ, ರೈಲು ಅಹಮದಾಬಾದ್‌ನಿಂದ 2:30 ಕ್ಕೆ ಹೊರಟು ಮರುದಿನ ಸಂಜೆ 7 ರ ಸುಮಾರಿಗೆ ದೆಹಲಿ ತಲುಪುತ್ತದೆ. ಈ ರೈಲಿನ ಜೊತೆಗೆ ಮುಂಬೈ ಮತ್ತು ಅಹಮದಾಬಾದ್ ನಡುವೆ ಇದೇ ರೀತಿಯ ಮೂರು ರೈಲುಗಳನ್ನು ಓಡಿಸಲಾಗುತ್ತಿದೆ.