ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದಿಂದಾಗಿ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಇದರ ಜೊತೆಗೆ ವಿದ್ಯುತ್ ಬೇಡಿಕೆಯೂ ಹೆಚ್ಚಾಗಿದ್ದು, ಪೂರೈಕೆ ಸಾಧ್ಯವಾಗದೆ ಹಲವು ಕಡೆ ಲೋಡ್ ಶೆಡ್ಡಿಂಗ್ ಜಾರಿ ಮಾಡಲಾಗಿದೆ.
ಪ್ರತಿದಿನ 200 ರಿಂದ 250 ದಶಲಕ್ಷ ಯೂನಿಟ್ ನಷ್ಟಿದ್ದ ಬೇಡಿಕೆ 323 ದಶ ಲಕ್ಷಕ್ಕೆ ಹೆಚ್ಚಳವಾಗಿದೆ. ವಿದ್ಯುತ್ ಪೂರೈಕೆ ಮಾಡಲು ಎಸ್ಕಾಂ ಗಳು ಪರದಾಟ ನಡೆಸಿವೆ. ಭಾರಿ ಬಿಸಿಲು, ಸೆಖೆ ಕಾರಣ ಜನ ಎಸಿ, ಫ್ಯಾನ್, ಕೂಲರ್ ಗಳ ಮೊರೆ ಹೋಗಿದ್ದಾರೆ. ಇದರಿಂದಾಗಿ ವಿದ್ಯುತ್ ಬೇಡಿಕೆ ಭಾರಿ ಹೆಚ್ಚಾಗಿದೆ. ಪೂರೈಕೆ ಸಾಧ್ಯವಾಗದೆ ಅನಧಿಕೃತವಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ.
ವಿದ್ಯುತ್ ಬೇಡಿಕೆ ತೀವ್ರ ಏರಿಕೆ ಕಂಡಿದ್ದರಿಂದ ಎಸ್ಕಾಂಗಳು ವಿದ್ಯುತ್ ಪೂರೈಸಲು ಸಾಧ್ಯವಾಗದೆ ಹಲವು ಕಡೆ ಅನಧಿಕೃತ ಲೋಡ್ ಶೆಡ್ಡಿಂಗ್ ಶುರು ಮಾಡಿವೆ. ಬೇಡಿಕೆ ಇದೇ ರೀತಿ ಏರಿಕೆ ಕಂಡಲ್ಲಿ ವಿದ್ಯುತ್ ಕೊರತೆ ಹೆಚ್ಚಾಗಿ ಲೋಡ್ ಶೆಡ್ಡಿಂಗ್ ಅನಿವಾರ್ಯವೆಂದು ಹೇಳಲಾಗಿದೆ.
ಪಿಯುಸಿ, ಎಸ್ಎಸ್ಎಲ್ಸಿ ಸೇರಿದಂತೆ ಮಕ್ಕಳಿಗೆ ಪರೀಕ್ಷೆಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಗಂಟೆಗಟ್ಟಲೇ ವಿದ್ಯುತ್ ಕಡಿತಗೊಳಿಸುವುದರಿಂದ ಮಕ್ಕಳಿಗೆ ಓದಲು ತೊಂದರೆಯಾಗಿದೆ ಎನ್ನಲಾಗಿದೆ.