ಬೆಂಗಳೂರು: ರಾಜ್ಯದಲ್ಲಿ ಮಲೇರಿಯಾ, ಚಿಕೂನ್ ಗುನ್ಯ, ಡೆಂಗಿ ಸೇರಿದಂತೆ ವೈರಾಣು ಜ್ವರ ಬಾಧೆ ಪ್ರಕರಣಗಳು ತೀವ್ರ ಏರಿಕೆಯಾಗಿದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು, ಆಸ್ಪತ್ರೆಗಳಲ್ಲಿ ದಾಖಲಾತಿ ಪ್ರಮಾಣ ಕೂಡ ಹೆಚ್ಚಿದೆ.
ಮಕ್ಕಳು ಹಾಗೂ ಹಿರಿಯರಲ್ಲಿ ಜ್ವರ ಬಾಧೆ ಹೆಚ್ಚಾಗಿದೆ. ಜ್ವರ, ಕೆಮ್ಮು, ನೆಗಡಿ, ಮೈ ಕೈ ನೋವು ಕಾಣಿಸಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಆಸ್ಪತ್ರೆಗೆ ಬರತೊಡಗಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಾಗಿದೆ.
ಜ್ವರ ಬಾಧೆ ಪ್ರಕರಣಗಳು ಹೆಚ್ಚಾಗಿ ರಾಜ್ಯದಲ್ಲಿ ನವೆಂಬರ್ 24ರ ವರೆಗೆ 14,116 ಡೆಂಗಿ ಪ್ರಕರಣ ಪತ್ತೆಯಾಗಿವೆ. ತುಮಕೂರು, ಶಿವಮೊಗ್ಗ, ವಿಜಯಪುರ, ಕಲಬುರಗಿ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಡೆಂಗಿ ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ನವೆಂಬರ್ 24ರ ವರೆಗೆ 1,410 ಚಿಕೂನ್ ಗುನ್ಯ ಪ್ರಕರಣಗಳು ವರದಿಯಾಗಿದೆ.