ಬಾರ್ಲಿ ಪೋಷಕಾಂಶಗಳು ಮತ್ತು ಖನಿಜಗಳನ್ನು ಒಳಗೊಂಡಿರುತ್ತದೆ. ಇದನ್ನು ಚರ್ಮಕ್ಕೆ ಬಳಸುವುದರಿಂದ ಚರ್ಮದಲ್ಲಿರುವ ಕೊಳೆಯನ್ನು ತೆಗೆದುಹಾಕಿ ಚರ್ಮದ ಕಾಂತಿ ಹೆಚ್ಚಿಸುತ್ತದೆ. ಹಾಗಾಗಿ ಬಾರ್ಲಿಯನ್ನು ಮುಖಕ್ಕೆ ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳಿ.
1 ಕಪ್ ಬಾರ್ಲಿ ಹಿಟ್ಟಿಗೆ ½ ಕಪ್ ಮೊಸರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ 5 ನಿಮಿಷ ಬಿಟ್ಟು ಮುಖಕ್ಕೆ ಹಚ್ಚಿ 20 ನಿಮಿಷ ಹಾಗೆ ಬಿಟ್ಟು ವಾಶ್ ಮಾಡಿ. ಇದನ್ನು ವಾರದಲ್ಲಿ ಒಮ್ಮೆ ಬಳಸಿ. ಇದರಿಂದ ಮುಖದಲ್ಲಿರುವ ಟ್ಯಾನ್ ಕಡಿಮೆಯಾಗಿ ಮುಖ ಬೆಳ್ಳಗಾಗುತ್ತದೆ.
1 ಕಪ್ ಬಾರ್ಲಿ, 4 ಚಮಚ ಅಕ್ಕಿ ಹಿಟ್ಟು, 1 ಚಮಚ ರೋಸ್ ವಾಟರ್, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ. ಮುಖವನ್ನು ಹಸಿ ಹಾಲಿನಿಂದ ಸ್ವಚ್ಚಗೊಳಿಸಿ ಈ ಫೇಸ್ ಪ್ಯಾಕ್ ಹಚ್ಚಿ. 25 ನಿಮಿಷ ಬಿಟ್ಟು ನೀರು ಸಿಂಪಡಿಸಿ ಕೈಗಳಿಂದ ನಿಧಾನವಾಗಿ ಮಸಾಜ್ ಮಾಡಿ ಬಳಿಕ ವಾಶ್ ಮಾಡಿ. ಇದನ್ನು 15 ದಿನಕ್ಕೊಮ್ಮೆ ಬಳಸಿ. ಇದರಿಂದ ಸತ್ತ ಚರ್ಮಕೋಶಗಳು ನಿವಾರಣೆಯಾಗಿ ಮೈಕಾಂತಿ ಹೆಚ್ಚುತ್ತದೆ.