ಕಪ್ಪಾದ ತುಟಿಯನ್ನು ಮರೆಮಾಚಲು ಮೇಕಪ್ ಮಾಡಿದರೆ ತುಟಿ ಮತ್ತಷ್ಟು ಕಪ್ಪಾಗುತ್ತದೆ. ಆದ್ದರಿಂದ ತುಟಿಯ ಕಪ್ಪು ಬಣ್ಣವನ್ನು ಹೋಗಲಾಡಿಸಲು ನೈಸರ್ಗಿಕವಾದ ವಿಧಾನಗಳನ್ನು ಅನುಸರಿಸುವುದು ಒಳ್ಳೆಯದು. ಇಲ್ಲಿರುವ ಕೆಲ ಟಿಪ್ಸ್ ತುಟಿಯ ರಂಗನ್ನು ಹೆಚ್ಚಿಸುವಲ್ಲಿ ಡೌಟೇ ಬೇಡ.
* ಗುಲಾಬಿ ಎಸಳುಗಳನ್ನು ಜಜ್ಜಿ ಅದಕ್ಕೆ ಒಂದು ಚಮಚ ಹಾಲು ಹಾಕಬೇಕು. ದಿನದಲ್ಲಿ ಮೂರು ಬಾರಿ ಇದರಿಂದ ತುಟಿಗಳನ್ನು ತೊಳೆಯಬೇಕು. ಇದು ತುಟಿಗೆ ಒಳ್ಳೆಯ ಬಣ್ಣ ನೀಡುವುದು.
* ಒಂದು ಚಮಚ ಹಾಲಿನ ಕೆನೆಗೆ ಕೆಲವು ಹನಿ ಗ್ಲಿಸರಿನ್ ಹಾಕಬೇಕು. ಇದನ್ನು ತುಟಿಗೆ ಹಚ್ಚಿಕೊಂಡು ಹತ್ತು ನಿಮಿಷ ಕಾಲ ಹಾಗೆಯೇ ಬಿಡಬೇಕು ಬಳಿಕ ತಣ್ಣೀರಿನಿಂದ ತೊಳೆಯಬೇಕು.
* ಮಲಗುವ ಮೊದಲು ತುಟಿಗಳಿಗೆ ಜೇನುತುಪ್ಪ ಹಚ್ಚಿಕೊಳ್ಳಬೇಕು. ರಾತ್ರಿಯಿಡೀ ಹಾಗೆಯೇ ಬಿಡಬೇಕು. ಇದು ತುಟಿಗಳಿಗೆ ಗುಲಾಬಿ ಬಣ್ಣ ನೀಡುವುದು ಮಾತ್ರವಲ್ಲದೆ ಮೃದುವಾಗಿಸುತ್ತದೆ.
* ಆಲಿವ್ ಆಯಿಲ್, ಜೇನುಮೇಣ, ಐದು ಹನಿ ರೋಸ್ಮೆರಿ ಎಣ್ಣೆ, ಐದು ಹನಿ ವಿಟಮಿನ್ ಇ ಆಯಿಲ್ ಮತ್ತು ಒಂದು ಚಮಚ ಗ್ರೇಪ್ ಸೀಡ್ ಆಯಿಲ್ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಬೇಕು. ಇದನ್ನು ಪ್ರತಿದಿನ ತುಟಿಗಳಿಗೆ ಹಚ್ಚಿಕೊಂಡರೆ ಒಳ್ಳೆಯ ಫಲಿತಾಂಶ ಸಿಗುವುದು.
* ಜೇನುತುಪ್ಪ, ನಿಂಬೆರಸ ಮತ್ತು ವಿಟಮಿನ್ ಇ ಆಯಿಲ್ ಅನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಇದನ್ನು ತುಟಿಗಳಿಗೆ ಹಚ್ಚಿಕೊಂಡು ಒಣಗಲು ಬಿಡಬೇಕು. ಬಳಿಕ ತಣ್ಣೀರಿನಿಂದ ತೊಳೆಯಬೇಕು. ಇದು ಕೂಡ ತುಟಿಗಳಿಗೆ ಬಣ್ಣ ನೀಡುತ್ತದೆ.