ಮೆಂತ್ಯೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತ್ಯೆ ಕಷಾಯ ಕುಡಿಯುವುದರಿಂದ ಬೆನ್ನು ನೋವಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಇದೇ ಮೆಂತೆ ಮುಖದ ಹಾಗೂ ಕೂದಲಿನ ಸೌಂದರ್ಯಕ್ಕೂ ಸಹಕಾರಿಯಾಗಿದೆ.
ಹೇಗೆ ಮೆಂತ್ಯೆಯಿಂದ ದೇಹದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ.
*ಮೆಂತ್ಯೆಯಲ್ಲಿ ವಿಟಮಿನ್ ಸಿ ಅಂಶ ಇರುತ್ತದೆ. ಇದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ. ನೆನೆಸಿದ ಮೆಂತ್ಯೆದಿಂದ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ನಂತರ ಮುಖ ತೊಳೆಯಿರಿ. ಕಲೆ ನಿವಾರಣೆಯಾಗುತ್ತದೆ. ಇನ್ನು ಒಂದು ಟೇಬಲ್ ಸ್ಪೂನ್ ಮೆಂತ್ಯೆ ಪುಡಿಗೆ ಸ್ವಲ್ಪ ಹಾಲು ಮಿಕ್ಸ್ ಮಾಡಿಕೊಂಡು ಪೇಸ್ಟ್ ಮಾಡಿಕೊಳ್ಳಿ ಇದನ್ನು ಫೇಶಿಯಲ್ ಮಾಸ್ಕ್ ರೀತಿ ಬಳಸುವುದರಿಂದ ಮುಖ ನೈಸರ್ಗಿಕವಾಗಿ ಕಂಗೊಳಿಸುತ್ತದೆ.
* ಇನ್ನು ಮುಖವನ್ನು ಕ್ಲೆನ್ಸಿಂಗ್ ಮಾಡುವುದಕ್ಕೆ ಕೂಡ ಈ ಮೆಂತ್ಯೆಯನ್ನು ಬಳಸಬಹುದು. 3 ಚಮಚ ಮೆಂತ್ಯೆಯನ್ನು ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ರುಬ್ಬಿಕೊಂಡು ಸ್ಕ್ರಬ್ ರೀತಿ ಇದನ್ನು ಬಳಸಿಕೊಳ್ಳಿ. ಮುಖದ ಮೇಲೆ 5 ನಿಮಿಷಗಳ ಕಾಲ ಇದನ್ನು ನಿಧಾನಕ್ಕೆ ಮಸಾಜ್ ಮಾಡಿ. ಡೆಡ್ ಸ್ಕಿನ್ ನಿವಾರಣೆಯಾಗುತ್ತದೆ.
*1 ಚಮಚ ಮೆಂತ್ಯೆ ಪುಡಿಗೆ ½ ಚಮಚ ಜೇನುತುಪ್ಪ ಹಾಗೂ ½ ಚಮಚ ಹಾಲನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ನಿಧಾನಕ್ಕೆ ಮಸಾಜ್ ಮಾಡಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ.