alex Certify BIG NEWS : ಕೋವಿಡ್ ಬಳಿಕ ಹೃದಯಾಘಾತ ಹೆಚ್ಚಳ : ಹೃದ್ರೋಗ ತಜ್ಞ ಡಾ. ಮಂಜುನಾಥ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಕೋವಿಡ್ ಬಳಿಕ ಹೃದಯಾಘಾತ ಹೆಚ್ಚಳ : ಹೃದ್ರೋಗ ತಜ್ಞ ಡಾ. ಮಂಜುನಾಥ್

ಬೆಂಗಳೂರು : ಕೋವಿಡ್ ಬಳಿಕ ಹೃದಯಾಘಾತ ಹೆಚ್ಚಳವಾಗುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಹೇಳಿದ್ದಾರೆ.

ಇಂದು ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಮೃತಪಟ್ಟಿದ್ದು, ಈ ಹಿನ್ನೆಲೆ ಡಾ. ಸಿ.ಎನ್. ಮಂಜುನಾಥ್ ಪ್ರತಿಕ್ರಿಯೆ ನೀಡಿದ್ದಾರೆ. ಕೋವಿಡ್ ಸೋಂಕಿನ ಬಳಿಕ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ.

ಕೋವಿಡ್ ಸೋಂಕು ಕಾಣಿಸಿಕೊಂಡನಂತರ ಹೃದಯಾಘಾತ ಆಗುವ ಸಂಖ್ಯೆ.ಶೇ.3 ರಿಂದ 4 ರಷ್ಟು ಹೆಚ್ಚಾಗಿದೆ. ಈ ಬಗ್ಗೆ ಆತಂಕ ಬೇಡ. ಆದರೆ ಎಚ್ಚರವಹಿಸುವುದು ಅಗತ್ಯ. 35 ವರ್ಷದ ನಂತರದ ಪುರುಷರು ಮತ್ತು ಮಹಿಳೆಯರು ವರ್ಷಕ್ಕೆ ಒಮ್ಮೆ ಇಸಿಜಿ, ರಕ್ತದೊತ್ತಡ ಸೇರಿದಂತೆ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಹೃದಯಾಘಾತಕ್ಕೆ ಜೀವನ ಶೈಲಿ, ಒತ್ತಡ ಕೂಡ ಕಾರಣವಾಗುತ್ತದೆ , ಎಲ್ಲರೂ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ, ಆಗಾಗ ಆಸ್ಪತ್ರೆಗಳಲ್ಲಿ ಚೆಕಪ್ ಮಾಡಿಸಿಕೊಳ್ಳಿ ಎಂದರು. ಯುವಕರಲ್ಲಿ ಹಾಗೂ ಮಧ್ಯ ವಯಸ್ಕರಲ್ಲಿ ಹೃದಯಾಘಾತದ ಪ್ರಮಾಣ ಕಳೆದ 10 ವರ್ಷದಲ್ಲಿ 22% ಹೆಚ್ಚಾಗಿದೆ. ಅತಿಯಾದ ಜಂಕ್ ಫುಡ್ ಹಾಗೂ ಧೂಮಪಾನ, ಮಧ್ಯಪಾನ, ಒತ್ತಡ ಹಾಗೂ ಅಧಿಕ ರಕ್ತದೊತ್ತಡದಿಂದ ಹೃದಯಾಘಾತ ಸಂಭವಿಸುತ್ತಿವೆ ಎಂದರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...