ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಪೊಲೀಸರು ಮುಂದಾಗಿದ್ದಾರೆ.
ನಿಗದಿತ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ವಾಹನ ಸವಾರರಿಗೆ ದಂಡ ವಿಧಿಸಲು ರಾಮನಗರ ಪೊಲೀಸರು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ರಾಮನಗರ ಜಿಲ್ಲೆ ಚನ್ನಪಟ್ಟಣ ಬಳಿ ಇಂಟರ್ ಸೆಪ್ಟರ್ ಅಳವಡಿಸಿ ವಾಹನಗಳ ಸ್ಪೀಡ್ ಚೆಕ್ ಮಾಡಲಾಗುತ್ತಿದೆ.
ವೇಗದ ಲಿಮಿಟ್ ಕ್ರಾಸ್ ಮಾಡುವ ವಾಹನ ಸವಾರರಿಗೆ 1000 ರೂ ದಂಡ ವಿಧಿಸಲಾಗುತ್ತಿದೆ. ಕಾರಿನ ವೇಗದ ಮಿತಿ 100, ಬೈಕ್ ವೇಗದ ಮಿತಿ 80 ಹಾಗೂ ಟ್ರಕ್, ಬಸ್, ಲಾರಿ ವೇಗದ ಮಿತಿ 60 ಕಿ.ಮೀ ನಿಗದಿಪಡಿಸಲಾಗಿದೆ. ನಿಗದಿ ಪಡಿಸಿದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಿಸಿದರೆ 1000 ರೂಪಾಯಿ ದಂಡ ವಿಧಿಸಲಾಗುತ್ತಿದೆ.