ಬೆಂಗಳೂರು : ಕರ್ನಾಟಕದಲ್ಲಿ ‘ಮದ್ಯ’ ಸೇವನೆ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಭರ್ಜರಿ ಆದಾಯ ಹರಿದು ಬಂದಿದೆ.
ಹೌದು, ಬಿಯರ್ ಜೊತೆಗೆ ಇತರೆ ಮಾದರಿಯ ಮದ್ಯ ಮಾರಾಟದ ಪ್ರಮಾಣ 0.43 ಶೇ. ಹೆಚ್ಚಳವಾಗಿದ್ದು, ಗ್ಯಾರಂಟಿ ಯೋಜನೆಗಳನ್ನು ನೀಡಿ ಬೇರೆ ಯೋಜನೆಗಳಿಗೆ ಹಣ ನೀಡಲು ಕಷ್ಟಪಡುತ್ತಿದ್ದ ಸರ್ಕಾರಕ್ಕೆ ಮದ್ಯ ಪ್ರಿಯರು ಬೂಸ್ಟ್ ನೀಡಿದ್ದಾರೆ.
ಮದ್ಯ ದರ ಏರಿಕೆಯಾದರೂ ತಲೆ ಕೆಡಿಸಿಕೊಳ್ಳದ ಮದ್ಯ ಪ್ರಿಯರು ಕುಡಿಯುವದನ್ನು ಕಡಿಮೆ ಮಾಡಲಿಲ್ಲ. ಕಳೆದ ವರ್ಷ ದಿನಕ್ಕೆ 80 ಕೋಟಿ ರೂ. ಸರಾಸರಿ ಆದಾಯ ಬರುತ್ತಿತ್ತು.ಈಗ ಒಂದು ದಿನಕ್ಕೆ 90 ಕೋಟಿ ರೂ,ಗೆ ಏರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅದರಲ್ಲಿಯೂ ಚಳಿಗಾಲ ಶುರುವಾಗ್ತಿದ್ದಂತೆ ರಾಜ್ಯದಲ್ಲಿ ಬಿಯರ್ ಗೆ ಭಾರೀ ಬೇಡಿಕೆ ಬಂದಿದ್ದು, ನವೆಂಬರ್ನಲ್ಲಿ ಬರೋಬ್ಬರಿ 6 ಲಕ್ಷ ಬಿಯರ್ ಬಾಕ್ಸ್ಗಳು ಸೇಲ್ ಆಗಿದೆ ಎಂದು ಮೂಲಗಳು ತಿಳಿಸಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ 29.95 ಲಕ್ಷ ಬಾಕ್ಸ್ ಸೇಲ್ ಆಗಿದ್ರೆ , ಈ ವರ್ಷ ನವೆಂಬರ್ ನಲ್ಲಿ 35.05 ಲಕ್ಷ ಬಾಕ್ಸ್ ಮಾರಾಟವಾಗಿದೆ. 2023 ನವೆಂಬರ್ ನಲ್ಲಿ 2,855 ಕೋಟಿ ರೂ. ಆದಾಯ ಬಂದಿದೆ.