![](https://kannadadunia.com/wp-content/uploads/2020/03/header_image_fustany-beauty-skincare-six_ways_to_use_rosewater-main_image.png)
ರೋಸ್ ವಾಟರ್ ಸೌಂದರ್ಯಕ್ಕೆ ಹೇಳಿ ಮಾಡಿಸಿದ್ದು ಮುಖಕ್ಕೆ ಯಾವುದೇ ಪ್ಯಾಕ್ ಹಾಕುವುದಕ್ಕಿರಲಿ ಇದನ್ನು ನಾವು ಬಳಸುತ್ತೇವೆ. ಎಲ್ಲಾ ಬಗೆಯ ತ್ವಚೆಯವರು ಕೂಡ ಇದನ್ನು ಬಳಸಬಹುದು. ಸೌಂದರ್ಯ ಹೆಚ್ಚಿಸುವುದರಲ್ಲಿ ಇದರ ಪಾತ್ರ ತುಂಬ ದೊಡ್ಡದ್ದು. ರೋಸ್ ವಾಟರ್ ಪ್ರಯೋಜನಗಳೇನು ಎಂಬುದರ ಕುರಿತು ಇಲ್ಲಿದೆ ನೋಡಿ ಒಂದಷ್ಟು ಮಾಹಿತಿ.
ಇದು ತ್ವಚೆಯ ಪಿಎಚ್ ಲೆವಲ್ ಅನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ. ಮುಖದಲ್ಲಿನ ಜಿಡ್ಡಿನಾಂಶವನ್ನು ನಿಯಂತ್ರಣದಲ್ಲಿಡುತ್ತದೆ.
ಒಂದು ಹತ್ತಿಯ ಉಂಡೆಗೆ ರೋಸ್ ವಾಟರ್ ಹಾಕಿ ಮುಖವನ್ನು ಒರೆಸಿಕೊಳ್ಳುವುದರಿಂದ ಮೊಡವೆ, ಮುಖದಲ್ಲಿನ ರಂಧ್ರಗಳನ್ನು ಕಡಿಮೆ ಮಾಡುತ್ತದೆ. ಮುಖದಲ್ಲಿನ ಕಲ್ಮಶವನ್ನು ಕೂಡ ಇದು ನಿವಾರಿಸುತ್ತದೆ.
ಮುಖದಲ್ಲಿ ಕಲೆ ಚುಕ್ಕಿಗಳಿದ್ದರೆ ಇದನ್ನು ಹಚ್ಚಿಕೊಳ್ಳುವುದರಿಂದ ಕಲೆಗಳು ಮಾಯವಾಗುತ್ತದೆ. ಗಾಯದ ಕಲೆ ಕೂಡ ನಿಧಾನಕ್ಕೆ ಮಾಗುತ್ತದೆ.
ಇನ್ನು ಸ್ನಾನ ಮಾಡುವ ನೀರಿಗೆ 4 ಹನಿ ರೋಸ್ ವಾಟರ್ ಸೇರಿಸಿ ಸ್ನಾನ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ತಲೆದಿಂಬಿಗೆ ರೋಸ್ ವಾಟರ್ ಅನ್ನು ಸ್ಪ್ರೆ ಮಾಡಿಕೊಂಡು ಮಲಗುವುದರಿಂದ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ.