ನವದೆಹಲಿ: ತೆರಿಗೆದಾರರ ಶಾಶ್ವತ ಖಾತೆ ಸಂಖ್ಯೆ (PAN) ಕಾರ್ಡ್ ಸಂಖ್ಯೆಯನ್ನು ಆಧಾರ್ಗೆ ಜೋಡಣೆ ಮಾಡಲು 2023ರ ಮಾರ್ಚ್ 31 ಕೊನೆಯ ದಿನವಾಗಿದೆ. ಈ ಅವಧಿಯಲ್ಲಿ ತೆರಿಗೆದಾರರು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ ವಿನಾಯಿತಿ ವರ್ಗಕ್ಕೆ ಒಳಪಡದ ಯಾವುದೇ ತೆರಿಗೆದಾರರ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಈಗ ಹೇಳಿದೆ.
ಆದಾಯ-ತೆರಿಗೆ ಕಾಯ್ದೆ, 1961 ರ ಪ್ರಕಾರ, ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲಾ ಪಾನ್ ಹೊಂದಿರುವವರು 31.3.2023 ರ ಮೊದಲು ಪಾನ್ ಅನ್ನು ತಮ್ಮ ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. 1.04.2023 ರಿಂದ, ಲಿಂಕ್ ಮಾಡದ ಪಾನ್ ನಿಷ್ಕ್ರಿಯಗೊಳ್ಳುತ್ತದೆ ಎಂದು ಇಲಾಖೆ ಹೇಳಿದೆ.
ತೆರಿಗೆ ಇಲಾಖೆಯು ರೂ. 1000 ಶುಲ್ಕವನ್ನು ಪಾವತಿಸಿದ ನಂತರ ಇಲಾಖೆಯ ವೆಬ್‌ಸೈಟ್ incometax.gov.in ನಲ್ಲಿ ಮಾನ್ಯವಾದ ಆಧಾರ್‌ನೊಂದಿಗೆ ಪಾನ್ಕಾರ್ಡ್ ಲಿಂಕ್ ಮಾಡಬಹುದು ಎಂದು ಹೇಳಿದೆ. ಆಧಾರ್ ಮತ್ತು ಪಾನ್ಕಾರ್ಡ್ ಲಿಂಕ್ ಆರಂಭದಲ್ಲಿ ಉಚಿತವಾಗಿತ್ತು. ಆದರೆ ಗಡುವು ವಿಸ್ತರಿಸುತ್ತಾ ಬಂದರೂ ತೆರಿಗೆದಾರರು ಇನ್ನೂ ಇದನ್ನು ಮಾಡದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗುತ್ತಿದೆ.