ಗೃಹ ಸಾಲದ ಮೇಲೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದರಿಂದಾಗಿ ತೆರಿಗೆ ಹೊರೆ ಕಡಿಮೆಯಾಗುತ್ತದೆ. ಮನೆ ರಿಪೇರಿ, ನವೀಕರಣಗಳಿಗೆ ಸಾಲಗಳು ಲಭ್ಯವಿದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಅಷ್ಟೇ ಅಲ್ಲ ನವೀಕರಣದ ಸಾಲಕ್ಕೂ ತೆರಿಗೆ ವಿನಾಯಿತಿಯ ಲಾಭ ಪಡೆಯಬಹುದು.
ಮನೆ ರಿಪೇರಿ ಬಯಸಿದ್ದರೆ ಬ್ಯಾಂಕುಗಳು ವಿಶೇಷ ಸಾಲ ನೀಡುತ್ತವೆ. ಈ ಸಾಲದ ಸಹಾಯದಿಂದ ಮನೆಗೆ ಬಣ್ಣ ಬಳಿಯಬಹುದು. ಹೊಸ ಮಹಡಿ, ಹೊಸ ಕೊಠಡಿ ಅಥವಾ ಬಾಲ್ಕನಿ ನಿರ್ಮಿಸಬಹುದು. ಸ್ನಾನಗೃಹ ಅಥವಾ ಅಡುಗೆ ಮನೆಗೆ ಟೈಲ್ಸ್ ಹಾಕಲು ಸಾಲ ಪಡೆಯಬಹುದು. ಮನೆ ಬಳಕೆಗಾಗಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸಲು ಸಾಲ ತೆಗೆದುಕೊಳ್ಳಬಹುದು.
ಆದಾಯ ತೆರಿಗೆ ನಿಯಮಗಳ ಪ್ರಕಾರ, ಇದು ಗೃಹ ಸುಧಾರಣಾ ಸಾಲದ ವ್ಯಾಪ್ತಿಗೆ ಒಳಪಟ್ಟಿದ್ದರೂ ಇದಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗುತ್ತದೆ. ಆದ್ರೆ ಕೆಲವೊಂದಕ್ಕೆ ತೆರಿಗೆ ವಿನಾಯಿತಿ ಸಿಗುವುದಿಲ್ಲ. ಈಜುಕೊಳ ನಿರ್ಮಿಸಲು ತೆರಿಗೆ ವಿನಾಯಿತಿ ಸಿಗುವುದಿಲ್ಲ. ಬಾಡಿಗೆ ಮನೆ ಮೆಂಟೆನೆನ್ಸ್ ಮಾಡಲು ಶೇಕಡಾ 30ರಷ್ಟು ಮಾತ್ರ ತೆರಿಗೆ ರಿಯಾಯಿತಿ ಪಡೆಯಬಹುದು. ಅಂದ್ರೆ ಬಾಡಿಗೆ ಮನೆಯಿಂದ ನಿಮಗೆ 2 ಲಕ್ಷ ರೂಪಾಯಿ ಬರ್ತಿದ್ದರೆ ಅದ್ರ ಮೆಂಟೆನೆನ್ಸ್ ಗೆ 60,000 ರೂಪಾಯಿ ಮಾತ್ರ ಖರ್ಚು ಮಾಡಬಹುದು. ಅದೇ ಮನೆಯಲ್ಲಿ ಮಾಲೀಕರು ವಾಸವಾಗಿದ್ದರೆ ನಿರ್ವಹಣೆಗೆ ಯಾವುದೇ ವಿನಾಯಿತಿ ಸಿಗುವುದಿಲ್ಲ.