2021-22ನೇ ಹಣಕಾಸು ವರ್ಷಕ್ಕೆ ಸಂಬಂಧಿತ ಆದಾಯ ತೆರಿಗೆ ರಿಟರ್ನ್ಸ್‌ಗಳು (ಐಟಿಆರ್) ಮತ್ತು ಆಡಿಟ್ ವರದಿಗಳನ್ನು ಸಲ್ಲಿಸಲು ಅನೇಕ ತಾಂತ್ರಿಕ ಮತ್ತು ಇತರ ಸಮಸ್ಯೆಗಳನ್ನು ತೆರಿಗೆ ಪಾವತಿದಾರರು ಎದುರಿಸುತ್ತಿರುವುದು ಗಮನಕ್ಕೆ ಬಂದಿದೆ. ಹಾಗಾಗಿ, ಸೆ. 31ಕ್ಕೆ ನಿಗದಿಪಡಿಸಲಾಗಿದ್ದ ಐಟಿಆರ್ ಸಲ್ಲಿಕೆ ಗಡುವನ್ನು ವರ್ಷಾಂತ್ಯ, ಅಂದರೆ ಡಿ.30ಕ್ಕೆ ವಿಸ್ತರಿಸಿದ್ದೇವೆ ಎಂದು ಆದಾಯ ತೆರಿಗೆ (ಐಟಿ) ಇಲಾಖೆ ಗುರುವಾರ ಹೇಳಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತೆಗೆದುಕೊಂಡಿರುವ ಈ ನಿರ್ಧಾರದಿಂದ ದೇಶದ ಬಹುಪಾಲು ತೆರಿಗೆ ಪಾವತಿದಾರರು ಸಮಾಧಾನದ ನಿಟ್ಟುಸಿರುಬಿಡುವಂತಾಗಿದೆ.
ಒಡೆದ ಹಾಲಿನಿಂದ ಮಾಡಿ ರುಚಿ ರುಚಿ, ಆರೋಗ್ಯಕರ ತಿನಿಸು
ಕೋವಿಡ್-19 ಸಾಂಕ್ರಾಮಿಕದ ಎರಡನೇ ಅಲೆಯ ಅಬ್ಬರದಿಂದಾಗಿ ಕಳೆದ ಜು.31 ಕ್ಕೆ ನಿಗದಿಯಾಗಿದ್ದ ಡೆಡ್‌ಲೈನ್ ಸೆ. 20ಕ್ಕೆ ವಿಸ್ತರಣೆ ಆಗಿತ್ತು. ಸದ್ಯ, ಎರಡನೇ ಬಾರಿಗೆ ಡೆಡ್‌ಲೈನ್ ವಿಸ್ತರಣೆಗೊಂಡಿದೆ. ತೆರಿಗೆ ಪಾವತಿ ವೆಬ್‌ಸೈಟ್‌ನಲ್ಲಿ ಕೆಲವು ತಾಂತ್ರಿಕ ದೋಷಗಳ ಬಗ್ಗೆ ಈಗಾಗಲೇ ಹಲವು ಕಾರ್ಪೊರೇಟ್ ಕಂಪನಿಗಳು ಕೇಂದ್ರ ಸರ್ಕಾರದ ಗಮನಕ್ಕೆ ತಂದಿವೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯವು ಕೂಡ ಗಂಭೀರವಾಗಿ ಚಿಂತನೆ ನಡೆಸಿ, ವೆಬ್‌ಸೈಟ್ ನಿರ್ವಾಹಕರಿಗೆ ಶೀಘ್ರವೇ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡಿದೆ.
ಈ ಮಧ್ಯೆ, ತಡವಾದ ಅಥವಾ ಪರಿಷ್ಕೃತ ಐಟಿಆರ್ ಸಲ್ಲಿಕೆ ಅವಧಿಯನ್ನು ಕೂಡ ಐಟಿ ಇಲಾಖೆಯು 2022ರ ಜ.31 ರಿಂದ ಎರಡು ತಿಂಗಳ ಅವಧಿಗೆ, ಅಂದರೆ ಮಾ.31ಕ್ಕೆ ವಿಸ್ತರಣೆ ಮಾಡಲಾಗಿದೆ. ರಿಪೋರ್ಟ್ ಆಫ್ ಆಡಿಟ್ ಸಲ್ಲಿಕೆಗೆ 2022ರ ಜ.15 ಅನ್ನು ಕೊನೆಯ ದಿನಾಂಕವಾಗಿಸಲಾಗಿದೆ.