ಕೋವಿಡ್-19 ಲಾಕ್‌ಡೌನ್ ಕಾರಣದಿಂದಾಗಿ 2020-21ರ ವಿತ್ತೀಯ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಡೆಡ್ಲೈನ್ ಅನ್ನು ಆದಾಯ ತೆರಿಗೆ ಇಲಾಖೆ ವಿಸ್ತರಿಸಿದೆ.
ಕಳೆದ ವಿತ್ತೀಯ ವರ್ಷದ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇದ್ದ ಕಡೆಯ ದಿನಾಂಕವನ್ನು ಜುಲೈ 31ರಿಂದ ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ. ಸೆಪ್ಟೆಂಬರ್ 30ರ ವೇಳೆಗೂ ತೆರಿಗೆ ರಿಟರ್ನ್ಸ್ ಸಲ್ಲಿಸಲಾರದ ಮಂದಿಗೆ ದಂಡದ ಸಮೇತ ಐಟಿಆರ್ ಸಲ್ಲಿಸಲು 31 ಜನವರಿ 2022ರವರೆಗೆ ಕಾಲಾವಕಾಶ ನೀಡಲಾಗಿದೆ.
SHOCKING NEWS: ಒಬ್ಬರಹಿಂದೊಬ್ಬರಂತೆ ಕೃಷ್ಣಾನದಿ ಪಾಲಾದ ನಾಲ್ವರು ಸಹೋದರರು….!
ಇದೇ ವೇಳೆ, ಖಾತೆಗಳ ಆಡಿಟಿಂಗ್ ಮಾಡಿಸಬೇಕಾದ ಕಂಪನಿಗಳು ಹಾಗೂ ಸಂಸ್ಥೆಗಳಿಗೆ ಡೆಡ್ಲೈನ್ ಅನ್ನು ಅಕ್ಟೋಬರ್ 31ರಿಂದ ನವೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ.
ಇದೇ ವೇಳೆ ಉದ್ಯೋಗದಾತರು ತಂತಮ್ಮ ಉದ್ಯೋಗಿಗಳಿಗೆ ತೆರಿಗೆ ರಿಟರ್ನ್ಸ್ ಸಂಬಂಧ ವಿತರಿಸುವ ಫಾರಂ 16ರ ಸಲ್ಲಿಕೆಯ ಕಡೆಯ ದಿನಾಂಕವನ್ನೂ ಸಹ ಜುಲೈ 15ಕ್ಕೆ ವಿಸ್ತರಿಸಲಾಗಿದೆ.