ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ತೆರಿಗೆದಾರರಿಗೆ 92,961 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಮರುಪಾವತಿಯನ್ನು ನೀಡಲಾಗಿದೆ ಎಂದು ಸಿಬಿಡಿಟಿ ತಿಳಿಸಿದೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಆದಾಯ ತೆರಿಗೆ ಇಲಾಖೆಗೆ ನೀತಿಯನ್ನು ರೂಪಿಸುತ್ತದೆ. ಈ ಅಂಕಿ ಅಂಶವು 61,53,231 ಪ್ರಕರಣಗಳಲ್ಲಿ 23,026 ಕೋಟಿ ರೂಪಾಯಿಗಳ ಆದಾಯ ತೆರಿಗೆ ಮರುಪಾವತಿ ಮತ್ತು 1,69,355 ಪ್ರಕರಣಗಳಲ್ಲಿ 69,934 ಕೋಟಿ ರೂಪಾಯಿಗಳ ಕಾರ್ಪೊರೇಟ್ ತೆರಿಗೆ ಮರುಪಾವತಿಗಳನ್ನು ಒಳಗೊಂಡಿದೆ ಎಂದು ತನ್ನ ಅಧಿಕೃತ ಟ್ವಿಟರ್ ಪೋಸ್ಟ್ ನಲ್ಲಿ ತಿಳಿಸಿದೆ.
ಸಿಬಿಡಿಟಿ ಏಪ್ರಿಲ್ 1, 2021 ರಿಂದ 2021 ರ ಅಕ್ಟೋಬರ್ 2021 ರವರೆಗೆ 63.23 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ 92,961 ಕೋಟಿ ರೂಪಾಯಿಗಳ ಮರುಪಾವತಿಯನ್ನು ನೀಡಿದೆ. ಇದರಲ್ಲಿ 2021-22 ರ 2498.18 ಕೋಟಿ ರೂ.ಗಳ 32.49 ಲಕ್ಷ ಮರುಪಾವತಿಗಳು ಸೇರಿವೆ ಎಂದು ಅದು ಹೇಳಿದೆ.